ಭಾರತ ಕಮ್ಯೂನಿಸ್ಟ್ ಪಕ್ಷ ( ಮಾರ್ಕ್ಸ್‌ವಾದಿ ,ಲೆನಿನ್ ವಾದಿ ) ಲಿಬರೇಶನ್ ದ.ಕ ಜಿಲ್ಲಾ ಸಮಿತಿ ವತಿಯಿಂದ ಸಂವಿಧಾನ ಉಳಿಸಿ, ಪ್ರಜಾಪ್ರಭುತ್ವ ರಕ್ಷಿಸಿ.
ಧರ್ಮ, ಜಾತಿ, ಮತ- ಪಂಥದ ಆಧಾರದಲ್ಲಿ ಜನರನ್ನು ಒಡೆದಾಳುತ್ತಿರುವ ಪ್ಯಾಶಿಸ್ಟ್ ಶಕ್ತಿಗಳನ್ನು ಸೋಲಿಸಿ. ಕಾರ್ಪೋರೇಟ್ ಲೂಟಿ, ಕೋಮು ದ್ವೇಷ ಮತ್ತು ಸಾಮಾಜಿಕ ಗುಲಾಮಗಿರಿಯ ವಿರುದ್ಧ ಸಂಘರ್ಷ ತೀವ್ರಗೊಳಿಸಿ ಎಂಬ ಪಕ್ಷದ ಕೇಂದ್ರ ಸಮಿತಿ ಯ ಅಭಿಯಾನದ ಅಂಗವಾಗಿ ಬಿ.ಸಿ.ರೋಡಿನಲ್ಲಿ
ವಿದ್ಯಾರ್ಥಿ ,ಯುವಜನರ ಸಮಾವೇಶ ಸಮಾವೇಶ ನಡೆಯಿತು.
ಸಮಾವೇಶವನ್ನು ಉದ್ಘಾಟಿಸಿ ಸಿ.ಪಿ.ಐ.ಎಂ.ಎಲ್ ಲಿಬರೇಶನ್ ರಾಜ್ಯ ಸಮಿತಿ ಸದಸ್ಯರು ಹಾಗೂ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ (AISA) ರಾಜ್ಯ ಸಂಚಾಲಕರಾದ ಲೇಖಾ ಅಡವಿಯವರು ಮಾತನಾಡಿ ಇಂದು ಈ ದೇಶದ ಸಂವಿಧಾನ ಅಪಾಯದಲ್ಲಿದ್ದು ಪ್ಯಾಶಿಸ್ಟ್ ಶಕ್ತಿಗಳು ಈ ದೇಶದ ಸಂವಿಧಾನವನ್ನು ನಾಶ ಮಾಡುತ್ತಿದೆ ಎಂದು ಆಪಾದಿಸಿದರು.
ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಸಿ.ಪಿ.ಐ.ಎಂ.ಎಲ್ ಲಿಬರೇಶನ್ ರಾಜ್ಯ ಸಮಿತಿ ಸದಸ್ಯರು ಹಾಗೂ ಕ್ರಾಂತಿಕಾರಿ ಯುವಜನ ಒಕ್ಕೂಟ (RYA) ರಾಜ್ಯ ಸಂಚಾಲಕರಾದ ಚೆನ್ನಯ್ಯ ರವರು ಮಾತನಾಡಿ ಇಂದು ದೇಶದಲ್ಲಿ ವಿದ್ಯಾರ್ಥಿ ಯುವಜನತೆ ಸಂವಿಧಾನ ವನ್ನು ಅರ್ಥಮಾಡಿಕೊಳ್ಳಬೇಕು ಇಲ್ಲದಿದ್ದಲ್ಲಿ ಪ್ಯಾಶಿಸ್ಟ್ ಶಕ್ತಿ ಗಳು ವಿದ್ಯಾರ್ಥಿ ಯುವಜನತೆಯ ಮೇಲೆ ಧರ್ಮದ ಅಫೀಮನ್ನು ತುಂಬಿ ಅವರನ್ನು ದಾರಿ ತಪ್ಪಿಸುತ್ತಿದ್ದಾರೆ ಈ ನಿಟ್ಟಿನಲ್ಲಿ ಈ ದೇಶದಲ್ಲಿ ವಿದ್ಯಾರ್ಥಿ ಯುವಜನತೆ ತಮ್ಮ ನಿಜವಾದ ಸಮಸ್ಯೆಗಳನ್ನು ಗುರುತಿಸಿ ಹೋರಾಟವನ್ನು ನಡೆಸಬೇಕು ಎಂದು ಕರೆ ನೀಡಿದರು.
ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ಮೋಹನ್ ಕೆ.ಇ ಹಾಗೂ ಪ್ರಗತಿಪರ ಚಿಂತಕರಾದ ರಾಜಾ ಚೆಂಡ್ತಿಮಾರ್ ಸಮಾವೇಶವನ್ನದ್ದೇಶಿಸಿ ಮಾತನಾಡಿದರು.
ಪಕ್ಷದ ದ.ಕ ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಪಕ್ಷದ ಮುಖಂಡರಾದ ತುಳಸೀದಾಸ್ ವಿಟ್ಲ, ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಮುಖಂಡರಾದ ತಾಬೀಸ್ ಪುತ್ತೂರು ಧನ್ಯವಾದ ಸಲ್ಲಿಸಿದರು.ಸಮಾವೇಶದ ಆರಂಭದಲ್ಲಿ ಸಂವಿಧಾನದ ಪೀಠಿಕೆಯನ್ನು ಓದುವ ಮೂಲಕ ಕಾರ್ಯ ಕ್ರಮ ಆರಂಭಿಸಲಾಯಿತು.