ಅಯೋಧ್ಯೆಯ ಶ್ರೀರಾಮಜನ್ಮಭೂಮಿಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ರಾಮಭಕ್ತ, ಕರಸೇವಕ ಹಾಗೂ ಪುರಸಭೆಯ ಹಿರಿಯ ಸದಸ್ಯ ಎ.ಗೋವಿಂದ ಪ್ರಭು ಅವರ ನೇತೃತ್ವದಲ್ಲಿ ನೇತ್ರಾವತಿ ನದಿ ಮಧ್ಯೆ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ನಡೆಯಿತು. ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದ ಎದುರು ನಡೆದ ಈ ಕಾರ್ಯಕ್ರಮದಲ್ಲಿ ಹಣತೆಯ ಬೆಳಕನ್ನು ನದಿಯ ತೀರದಲ್ಲಿ ಜೋಡಿಸಿ, ಶ್ರೀದೇವರ ಪೂಜೆ ನಡೆಯಿತು. ನೇತ್ರಾವತಿ ನದಿಯಲ್ಲಿ ತೆಪ್ಪದ ಮಾದರಿಯನ್ನು ರಚಿಸಿ, ದೀಪಾರಾಧನೆಯ ರೂಪದಲ್ಲಿ ಪೂಜೆ ನಡೆದರೆ, ಮತ್ತೊಂದೆಡೆ ಶ್ರೀರಾಮಚಂದ್ರನ ಪ್ರತಿಕೃತಿ ಗಮನ ಸೆಳೆಯಿತು.ಪ್ರವೇಶದ್ವಾರದಲ್ಲಿ ಹನುಮನ ಪ್ರತಿಕೃತಿ ಭಕ್ತರನ್ನು ಸೆಳೆಯಿತು. ನದಿಗೆ ತೆರಳುವ ಮೆಟ್ಟಿಲಿನಲ್ಲಿ ಕುಳಿತ ಭಕ್ತರು ಪೂಜಾ ವಿಧಿ ವಿಧಾನಗಳನ್ನು ವೀಕ್ಷಿಸಿ, ಭಗವಂತನ ಕುರಿತ ಪ್ರವಚನವನ್ನು ಆಲಿಸಿ, ಪೂಜಾಸ್ಥಳಕ್ಕೆ ತೆರಳಿ, ಪ್ರಸಾದ ಸ್ವೀಕರಿಸಿ, ಫಲಾಹಾರ ಸೇವಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…