ಬಂಟ್ವಾಳ

ನಂದನಹಿತ್ತಿಲು ದೈವಸ್ಥಾನ: ಧ್ವಜಸ್ತಂಭ ತೈಲಾಧಿವಾಸ ಪೂರ್ವಭಾವಿ ಸಭೆ

ನಂದನಹಿತ್ತಿಲು  ಶ್ರೀ ವೈದ್ಯನಾಥ ಅರಸು ಜುಮಾದಿ ಬಂಟ ದೈವಸ್ಥಾನಕ್ಕೆ ನೂತನ ದ್ವಜಸ್ತಂಭ ತರುವ ಬಗ್ಗೆ ಹಾಗೂ ಧ್ಬಜಸ್ತಂಭದ ತೈಲಾಧಿವಾಸ ಕಾರ್ಯಕ್ರಮದ ಬಗ್ಗೆ ಪೂರ್ವಭಾವಿ ಸಭೆ ದೈವಸ್ಥಾನದಲ್ಲಿ ‌ಜರಗಿತು.

ಆಡಳಿತ ಮಂಡಳಿ ಅಧ್ಯಕ್ಷ ಗಣೇಶ್ ಸುವರ್ಣ ನೇತೃತ್ವದಲ್ಲಿ ಸಭೆ ನಡೆಯಿತು.  ಈ ಸಂದರ್ಭ ಮಾತನಾಡಿದ ಅವರು ಕೊಡಿಮರವನ್ನು ಗ್ರಾಮದ ಯುವಕರು ಹೆಗಲಿಗೆ ಹೆಗಲು ಕೊಟ್ಟು ಹೊತ್ತುಕೊಂಡು ಮೆರವಣಿಗೆ ಮೂಲಕ ಬಂಟ್ವಾಳ ‌ಪೇಟೆಯಲ್ಲಿ ದೇವಸ್ಥಾನಕ್ಕೆ ತರುವ ಯೋಚನೆ ಮಾಡಲಾಗಿದೆ. ಇದರ ಜೊತೆಗೆ ವಿವಿಧ ಭಜನೆಯ ತಂಡಗಳು ಜೊತೆಯಾಗಲಿದೆ ಎಂದು ಅವರು ತಿಳಿಸಿದರು. ಕೊಡಿಮರವನ್ನು ಹೊತ್ತಕೊಂಡು ತರುವುದಕ್ಕಾಗಿ ಗ್ರಾಮದ ಸುಮಾರು 40 ಜನರ ಯುವಕರ ತಂಡ ಸಿದ್ದವಾಗಿದ್ದು, ಶುದ್ಧಾಚಾರದಲ್ಲಿ ಕಳಸ ನೀರು ಸ್ನಾನ ಮಾಡಿ ಬಳಿಕ ಕೊಡಿಮರಕ್ಕೆ ಹೆಗಲು ಕೊಡುತ್ತೇವೆ ಎಂದು ಮಾತು ಕೊಟ್ಟಿದ್ದಾರೆ ಎಂದು ಅವರು ತಿಳಿಸಿದರು.

ಕೊಡಿಮರದ ಕೆತ್ತನೆಯ ಕೆಲಸ ಅಂತಿಮ ಹಂತದಲ್ಲಿದ್ದು, ಕೊಡಿಮರವನ್ನು ತರುವ ಕಾರ್ಯಕ್ರಮವನ್ನು ಯಾವರೀತಿ ಮಾಡುವುದು ಮತ್ತು ಪೂರಕ ಕೆಲಸವನ್ನು ಯಾವ ರೀತಿ ಮಾಡುವುದು ಎಂಬ ವಿಚಾರದ ಬಗ್ಗೆ ಚರ್ಚೆ ನಡೆಸಿದರು.

ದೈವಸ್ಥಾನಕ್ಕೆ ತಂದ ಬಳಿಕ ಕೊಡಿಮರದ ತೈಲಾಧಿವಾಸ ಬಗ್ಗೆಯೂ ಚರ್ಚಿಸಲಾಯಿತು. ಮಾ.30 ಕ್ಕೆ ಕೊಡಿಮರದ ಪ್ರತಿಷ್ಟಾಪನೆ ಮಾಡಲಿರುವುದರಿಂದ ಅದಕ್ಕೆ ಪೂರ್ವಭಾವಿಯಾಗಿ ಯಶಸ್ವಿಯಾಗಿ ಕಾರ್ಯಕ್ರಮ ಆಯೋಜಿಸಲು ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ಚರ್ಚಿಸಿ ಫೆ.4 ರಂದು ಕೊಡಿಮರವನ್ನು ದೈವಸ್ಥಾನಕ್ಕೆ ತರುವ ಬಗ್ಗೆ ದಿನ ನಿಗದಿಮಾಡಲಾಗಿದೆ. ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದ ಮನೆತನದ ಸುಧೀರ್ ಬಾಳಿಗ, ಪ್ರಮುಖರಾದ ರಾಮ್ ದಾಸ ಬಂಟ್ವಾಳ, ಅವಿನಾಶ್ ಕಾಮತ್, ಗಿರಿಪ್ರಕಾಶ್ ತಂತ್ರಿ, ಸಂಜೀವ ಪೂಜಾರಿ, ವಿಶ್ವನಾಥ ಪೂಜಾರಿ, ಲೋಕನಾಥ ಬಂಗೇರ,ವೆಂಕಪ್ಪ ಪೂಜಾರಿ,  ಲೋಕೇಶ್ ಪೂಜಾರಿ,ಬಾಬು ಶೆಟ್ಟಿ, ಪ್ರವೀಣ್ ಶೆಣೈ ,ಕೊಡಿಮರದ ಕೆತ್ತನೆ ಕೆಲಸಗಾರ ಪ್ರವೀಣ್ ,ಮಹಾಬಲ ಬಂಟ್ವಾಳ ಮತ್ತಿತರ ಊರಿನ ಪ್ರಮುಖರು ಹಾಜರಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts