ಮೆರವಣಿಗೆಗೆ ಚಾಲನೆ ನೀಡಿದ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು. ಮಾಜಿ ಸಚಿವ ಬಿ.ರಮಾನಾಥ ರೈ ಅವರು ಶುಭಹಾರೈಸಿದರು.
ಕೇರಳದ ಚೆಂಡೆ, ಬ್ಯಾಂಡ್, ಕೀಲುಕುದುರೆ ಮೊದಲಾದ ಕಲಾತಂಡಗಳು, ಕೊಡೆ ಹಿಡಿದ ಮಹಿಳೆಯರು ಮೆರವಣಿಗೆಗೆ ಮೆರುಗು ನೀಡಿದರು. ಅಕ್ಕಿ, ತೆಂಗಿನಕಾಯಿ, ಸೀಯಾಳ, ದಿನಸಿ ಸಾಮಾಗ್ರಿಗಳು, ತರಕಾರಿಗಳು, ಅಡಿಕೆ, ಬಾಳೆ ಮೊದಲಾದ ಸುವಸ್ತುಗಳನ್ನು ಮೆರವಣಿಗೆಯ ಮೂಲಕ ಕ್ಷೇತ್ರಕ್ಕೆ ಸಾಗಿಸಲಾಯಿತು. ಈ ಸಂದರ್ಭದಲ್ಲಿ ಸರಪಾಡಿ ಯುವಕ ಮಂಡಲ ಪ್ರಾಯೋಜಿತ ಭಕ್ತಿಗೀತೆಯನ್ನು ಸ್ವಾಮೀಜಿ ಬಿಡುಗಡೆಗೊಳಿಸಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಂ.ಎಸ್.ಶೆಟ್ಟಿ ಸರಪಾಡಿ, ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಪ್ರಧಾನ ಕಾರ್ಯದರ್ಶಿ ನಾರಾಯಣ ಶೆಟ್ಟಿ ಹೊಳ್ಳರಗುತ್ತು, ಕಾರ್ಯದರ್ಶಿ ರಾಧಾಕೃಷ್ಣ ರೈ ಕೊಟ್ಟುಂಜ, ಬ್ರಹ್ಮಕಲಶ ಸಮಿತಿ ಸಂಚಾಲಕ ಸಂಜೀವ ಪೂಜಾರಿ ಕಟ್ಟದಡೆ, ಕಾರ್ಯದರ್ಶಿ ಚೇತನ್ ಅಮೀನ್ ಬಜ, ಮೊಕ್ತೇಸರರಾದ ಉಮೇಶ್ ಆಳ್ವ ಕೊಟ್ಟುಂಜ, ವಿಠಲ್ ಎಂ.ಆರುಮುಡಿ, ಚಂದ್ರಶೇಖರ ಶೆಟ್ಟಿ ಎಚ್, ದಯಾನಂದ ಪೂಜಾರಿ ಕೋಡಿ, ಕೊರಗಪ್ಪ ಗೌಡ ಪಠಣ, ಸುರೇಂದ್ರ ಪೈ, ಗಿರಿಧರ್ ನಾಯ್ಕ್ ಮಠದಬೆಟ್ಟು, ದಯಾವತಿ ಎಸ್, ಮುಂಬಯಿ ಸಮಿತಿಯ ಶಶಿಕುಮಾರ್ ಶೆಟ್ಟಿ ಕಲ್ಕೊಟ್ಟೆ, ಆರ್ಥಿಕ ಸಮಿತಿಯ ಸಂತೋಷ್ ಶೆಟ್ಟಿ ಪಿ, ಹೊರೆಕಾಣಿಕೆ ಸಮಿತಿಯ ಸಂಜೀವ ಪೂಜಾರಿ ಬಿ, ಸದಾನಂದ ಡಿ.ಶೆಟ್ಟಿ, ಭುವನೇಶ್ ಪಚ್ಚಿನಡ್ಕ, ಬಿ.ದೇವದಾಸ್ ಶೆಟ್ಟಿ, ರವಿ ಕಕ್ಯಪದವು, ಪುರುಷೋತ್ತಮ ಪೂಜಾರಿ, ವಿವಿಧ ಕ್ಷೇತ್ರದ ಪ್ರಮುಖರಾದ ದೇಜಪ್ಪ ಬಾಚಕೆರೆ, ಬಿ.ಪದ್ಮಶೇಖರ್ ಜೈನ್, ದೇವಪ್ಪ ಪೂಜಾರಿ, ಬೇಬಿ ಕುಂದರ್, ಚಂದ್ರಹಾಸ ಡಿ.ಶೆಟ್ಟಿ, ಸಂಪತ್‌ಕುಮಾರ್ ಶೆಟ್ಟಿ, ವಿಶ್ವನಾಥ್ ಬಿ. ಮೊದಲಾದವರಿದ್ದರು. ಬ್ರಹ್ಮಕಲಶ ಸಮಿತಿ ಪ್ರಧಾನ ಕಾರ್ಯದರ್ಶಿ ಸರಪಾಡಿ ಅಶೋಕ ಶೆಟ್ಟಿ ಸ್ವಾಗತಿಸಿ, ವಂದಿಸಿದರು