ಕಲ್ಲಡ್ಕ ಉಮಾಶಿವ ಕ್ಷೇತ್ರದಲ್ಲಿ ಆಸಕ್ತರಿಗಾಗಿ ವಾರದಲ್ಲಿ ಒಂದು ದಿನ ವೈದಿಕ ಪಾರಂಗತರಿಂದ ಶ್ರೀ ಲಲಿತಾ ಸಹಸ್ರನಾಮ ತರಗತಿ ಪ್ರಾರಂಭಿಸುವ ಉದ್ದೇಶದಿಂದ ವಾಟ್ಸ್ ಆ್ಯಪ್ ಗ್ರೂಪ್” ಶ್ರೀ ಲಲಿತಾ ಸಹಸ್ರನಾಮ ಕಲ್ಲಡ್ಕ” ಪ್ರಾರಂಭಿಸಿದ್ದೇವೆ.ತರಗತಿಗೆ ಸೇರಲು ಇಚ್ಚಿಸುವವರು ಮಾತ್ರ ಈ ಕೆಳಗಿನ ಲಿಂಕ್ ಮೂಲಕ join ಆಗಬಹುದು. ವಿಶೇಷ ಶಕ್ತಿ ಮತ್ತು ಅಧಿಕ ಪುಣ್ಯಫಲ ನೀಡುವ ಮಂತ್ರವೇ ಶ್ರೀ ಲಲಿತಾ ಸಹಸ್ರನಾಮ. ಧಾರ್ಮಿಕ ಸ್ಥಳಗಳಿಗೆ ಬೇಟಿ ನೀಡಿದ ಫಲ, ಪೂಜಾ ಫಲ, ಅರೋಗ್ಯ, ದುಷ್ಟ ಶಕ್ತಿ ನಿವಾರಣೆ, ಸಂತಾನ ಭಾಗ್ಯ ಶತ್ರು ಭಯ ನಿವಾರಣೆ ಇತ್ಯಾದಿ ಫಲಗಳು ಶ್ರೀ ಲಲಿತಾ ಸಹಸ್ರನಾಮ ಪಾರಾಯಣ ದಿಂದ ಲಭಿಸುತ್ತದೆ. ಕುಟುಂಬದ ಎಲ್ಲ ಸದಸ್ಯರು ಜೊತೆಯಾಗಿ ಪಠಣ ಮಾಡಬಹುದಾದ ಶ್ರೀ ಲಲಿತಾ ಸಹಸ್ರನಾಮವನ್ನು ಪಠಿಸುವುದರಿಂದ ಕುಟುಂಬದಲ್ಲಿ ಶಾಂತಿ, ಏಕತೆ, ಮಾನಸಿಕ ದೃಡತೆ ಮತ್ತು ಸಮೃದ್ಧಿ ನೆಲೆಸುತ್ತದೆ.
ತರಗತಿ ಪ್ರಾರಂಭದ ಬಗ್ಗೆ ಮುಂದಿನ ಕೆಲವೇ ದಿನಗಳಲ್ಲಿ ತಿಳಿಸಲಾಗುವುದು. ಈ ಲಿಂಕ್ ಬೇರೆಯವರಿಗೂ ಫಾರ್ವರ್ಡ್ ಮಾಡುವುದರ ಮೂಲಕ ನಮ್ಮ ಸನಾತನ ಹಿಂದೂ ಸಂಸ್ಕೃತಿ ಬೆಳೆಸೋಣ https://chat.whatsapp.com/HsEVFiQ594pD5Mc34tCyl8
ಹಾಗೆಯೇ ಮೂರು ವರುಷಗಳಿಂದ, ಪ್ರತಿ ಭಾನುವಾರ, ಸಂಜೆ 4 ಘಂಟೆಯಿಂದ, ಉಮಾಶಿವ ಕ್ಷೇತ್ರ ಕಲ್ಲಡ್ಕದಲ್ಲಿ ಉಚಿತ ಸಂಗೀತ ಮತ್ತು ಭಜನೆ ತರಗತಿಗಳು ನಡೆಯುತ್ತಿವೆ. ಕಲಿಯಲು ಸರಿಯಾಗಿ ಆಸಕ್ತಿ ಉಳ್ಳವರು ಈ ಬಗ್ಗೆ ನಮ್ಮನ್ನು ಸಂಪರ್ಕಿಸಬಹುದು. Dr ಮಹೇಶ ಪದ್ಯಾಣ, ಸಂಗೀತವಾಹಿನಿ ಕಲ್ಲಡ್ಕ, 9448093317