ಚಿನಿವಾರ್ತೆ ಅನಂತರಾಯ ಪೈ ಮತ್ತು ಕುಟುಂಬಸ್ಥರ ವತಿಯಿಂದ ಬಂಟ್ವಾಳದ ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನದಲ್ಲಿ ಶನಿವಾರ ಸಂಜೆ 6.30ಕ್ಕೆ ಯಕ್ಷಗಾನ ಬಯಲಾಟ ನಡೆಯಲಿದೆ. ಶ್ರೀ ದೇವಳದ ನೇತ್ರಾವತಿ ನದಿ ತೀರದ ವಟವೃಕ್ಷದ ಸಮೀಪ ಭವ್ಯವಾದ ವೇದಿಕೆಯಲ್ಲಿ ಶ್ರೀ ಹನುಮಗಿರಿ ಮೇಳದ ಕಲಾವಿದರಿಂದ ಇಂದ್ರಪ್ರಸ್ಥ ಎಂಬ ಕಥಾಭಾಗದ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಮೊಕ್ತೇಸರರು ಹಾಗೂ ಸೇವಾಕರ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.