ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್, ಚಿಣ್ಣರ ಲೋಕ ಸೇವಾ ಬಂಧು ಸಂಯುಕ್ತ ಆಶ್ರಯದಲ್ಲಿ ಕರಾವಳಿ ಕಲೋತ್ಸವ ವತಿಯಿಂದ ಕರಾವಳಿ ಸರಿಗಮಪ ರಾಜ್ಯಮಟ್ಟದ ಸಂಗೀತ ಸ್ಪರ್ಧೆ ದಿ.ತೀರ್ಥಪ್ರಸಾದ್ ನೆನಪಿನೊಂದಿಗೆ ಬಂಟ್ವಾಳ ಗೋಲ್ಡನ್ ಪಾರ್ಕ್ ಮೈದಾನದ ದಿ.ಮಂಜುವಿಟ್ಲ ವೇದಿಕೆಯಲ್ಲಿ ನಡೆಯಿತು.
ರಾಜ್ಯದ ನಾನಾ ಜಿಲ್ಲೆಗಳಿಂದ 74 ಸ್ಪರ್ಧಿಗಳು ಭಾಗವಹಿಸಿದ್ದು, ಜ್ಯೂನಿಯರ್ ವಿಭಾಗದಲ್ಲಿ ಉಡುಪಿಯ ಪರ್ಜನ್ಯ ರಾವ್ ಸೀನಿಯರ್ ವಿಭಾಗದಲ್ಲಿ ಕಾಸರಗೋಡಿನ ಶ್ರೀರಕ್ಷಾ ಸರ್ಪಂಗಳ ಪ್ರಥಮ ಸ್ಥಾನ ಗಳಿಸಿದ್ದಾರೆ.ಕಲಾವಿದರಾದ ಸುಹಾಸ್ ಕೌಶಿಕ್ ಮಣಿಪಾಲ, ಪಲ್ಲವಿ ಪ್ರಭು ಮಣಿಪಾಲ ನಿರ್ಮಾಣಯಕರಾಗಿದ್ದರು. ಜ್ಯೂನಿಯರ್ ವಿಭಾಗದಲ್ಲಿ ಉಡುಪಿಯ ಪರ್ಜನ್ಯ ರಾವ್ ಪ್ರಥಮ, ವಿಟ್ಲದ ವಿಭಾ ದ್ವಿತೀಯ, ಬಂಟ್ವಾಳದ ಮೇಘನಾ ರಾವ್ ತೃತೀಯ ಪ್ರಶಸ್ತಿ ಪಡೆದುಕೊಂಡರು.
ಸೀನಿಯರ್ ವಿಭಾಗದಲ್ಲಿ ಕಾಸರಗೋಡಿನ ಶ್ರೀರಕ್ಷಾ ಸರ್ಪಂಗಳ ಪ್ರಥಮ, ಮಂಗಳೂರಿನ ಯಶಸ್ ರಾವ್ ದ್ವಿತೀಯ, ಕಾಸರಗೋಡಿನ ಜ್ಞಾನಕುಮಾರ್ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ. ಪ್ರಮುಖರಾದ ಮೋಹನದಾಸ ಕೊಟ್ಟಾರಿ, ಸುದರ್ಶನ ಜೈನ್ ಮತ್ತಿತರರು ಉಪಸ್ಥಿತರಿದ್ದರು.