ಕಲ್ಲಡ್ಕ ಸಮೀಪದ ಗೋಳ್ತಮಜಲು ರಹ್ಮಾನಿಯಾ ಜುಮಾ ಮಸೀದಿ ಇದರ ಆಶ್ರಯದಲ್ಲಿ ಎಸ್ಕೆಎಸ್ಸೆಸ್ಸೆಫ್ ಕಲ್ಲಡ್ಕ ಶಾಖೆಯ ವತಿಯಿಂದ ಮಜ್ಲಿಸುನ್ನೂರ್ ಐದನೇ ವಾರ್ಷಿಕ ಹಾಗೂ ಧಾರ್ಮಿಕ ಪ್ರವಚನ ಕಾರ್ಯಕ್ರಮ ಗೋಳ್ತಮಜಲು ಮಸೀದಿ ವಠಾರದ ಮರ್ಹೂಂ ಅಬ್ದುಲ್ ಹಮೀದ್ ಹಾಗೂ ಮುಹಮ್ಮದ್ ಶರೀಫ್ ವೇದಿಕೆಯಲ್ಲಿ ನಡೆಯಿತು.
ಮಜ್ಲಿಸುನ್ನೂರ್ ವಾರ್ಷಿಕದ ನೇತ್ರತ್ವ ವಹಿಸಿದ್ದ ಸಯ್ಯಿದ್ ಇಬ್ರಾಹಿಂ ಬಾತಿಷ ತಂಙಳ್ ಅಲ್ ಬುಖಾರಿ ಆನೆಕಲ್ ಮಾತನಾಡಿ ಧಾರ್ಮಿಕ ಕೇಂದ್ರಗಳು ಧಾರ್ಮಿಕ ವಿಧಿ ವಿಧಾನಗಳ ಜೊತೆಗೆ ಶಿಕ್ಷಣವೂ ಸೇರಿದಂತೆ ಆಯಾಯ ಜಮಾಅತ್ ವ್ಯಾಪ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಕಾರ್ಯಾಚರಿಸಬೇಕು ಎಂದು ಕರೆ ನೀಡಿದರು.
ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಖತೀಬ್ ಅಬೂ ಝಾಹಿರಾ ಕೆ.ಎಸ್.ಉಸ್ಮಾನ್ ದಾರಿಮಿ ಉದ್ಘಾಟಿಸಿದರು. ಮಸೀದಿ ಅಧ್ಯಕ್ಷ ಅಬೂಬಕ್ಕರ್ ಹಾಜಿ ಗೋಳ್ತಮಜಲು ಅಧ್ಯಕ್ಷತೆ ವಹಿಸಿದ್ದರು. ಮುಹಮ್ಮದ್ ಹನೀಫ್ ನಿಝಾಮಿ ಮೊಗ್ರಾಲ್, ಸಿರಾಜುದ್ದೀನ್ ದಾರಿಮಿ ಕಕ್ಕಾಡು ಮುಖ್ಯ ಭಾಷಣಗೈದರು.
ಕೆ.ಸಿ.ರೋಡ್ ಎಂ.ಐ.ಎಂ. ಖತೀಬ್ ಹಾಜಿ ಯಹ್ಯಾ ದಾರಿಮಿ, ಕಲ್ಲಡ್ಕ ಮದರಸ ಮುಖ್ಯ ಶಿಕ್ಷಕ ಅಬ್ದುಲ್ ಲತೀಫ್ ದಾರಿಮಿ, ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಮಾಜಿ ಮುದರ್ರಿಸ್ ಕೆ.ಎಸ್.ಹೈದರ್ ದಾರಿಮಿ, ಕಾರ್ಯದರ್ಶಿ ಹಾಜಿ ಅಬೂಬಕ್ಕರ್ ಸಾಹೇಬ್, ಗೋಳ್ತಮಜಲು ರಹ್ಮಾನಿಯಾ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮುಹಮ್ಮದ್ ಹನೀಫ್ ಗೋಳ್ತಮಜಲು, ಕಾರ್ಯದರ್ಶಿ ಮಹಮ್ಮದ್ ಆಸಿಫ್, ಕೆ.ಸಿ.ರೋಡ್ ಆಯಿಷಾ ಇಬ್ರಾಹಿಂ ಜುಮಾ ಮಸೀದಿ ಅಧ್ಯಕ್ಷ ಎಫ್.ಕೆ.ಅಬ್ದುಲ್ ಖಾದರ್, ಕಾರ್ಯದರ್ಶಿ ಫವಾಝ್ ಸನ್ ಲೈಟ್, ಎಸ್ಕೆಎಸ್ಸೆಸ್ಸೆಫ್ ಕಲ್ಲಡ್ಕ ಶಾಖೆಯ ಅಧ್ಯಕ್ಷ ಇಕ್ಬಾಲ್ ಕೆ.ಎಂ, ಕಾರ್ಯದರ್ಶಿ ಮಹಮ್ಮದ್ ಇಕ್ಬಾಲ್, ಕೋಶಾಧಿಕಾರಿ ಹಾಜಿ ಜಿ. ಮುಹಮ್ಮದ್ ಶಹೀದ್, ಮಾಣಿ ವಲಯಾಧ್ಯಕ್ಷ ಜಮಾಲ್ ಕೋಡಪದವು, ಕಾರ್ಯದರ್ಶಿ ಅಬ್ದುಲ್ ಮಜೀದ್ ದಾರಿಮಿ, ಕಲ್ಲಡ್ಕ ಕ್ಲಸ್ಟರ್ ಅದ್ಯಕ್ಷ ರಫೀಕ್ ಫೈಝಿ ಕುಕ್ಕಿಲ, ಕಾರ್ಯದರ್ಶಿ ಮುಹಮ್ಮದ್ ನಿಯಾಝ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಲ್ಲಡ್ಕ ಮುನೀರುಲ್ ಇಸ್ಲಾಂ ಮದ್ರಸ ವಿದ್ಯಾರ್ಥಿಗಳಿಂದ ಆಕರ್ಷಕ ದಫ್ ಪ್ರದರ್ಶನ ನಡೆಯಿತು. ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನ ಏರ್ಪಡಿಸಲಾಗಿತ್ತು. ಗೋಳ್ತಮಜಲು ರಹ್ಮಾನಿಯಾ ಜುಮಾ ಮಸೀದಿ ಖತೀಬ್ ಅಬ್ದುಲ್ ಹಮೀದ್ ದಾರಿಮಿ ಸ್ವಾಗತಿಸಿ, ಗೋಳ್ತಮಜಲು ಶಂಸುಲ್ ಉಲಮಾ ಮಹಿಳಾ ಶರೀಅತ್ ಕಾಲೇಜು ಪ್ರಾಂಶುಪಾಲ ಹಾರಿಸ್ ಕೌಸರಿ ಪ್ರಸ್ತಾವನೆ ಗೈದರು. ಗೋಳ್ತಮಜಲು ಮದರಸ ಶಿಕ್ಷಕ ಅಬ್ದುರ್ರಹ್ಮಾನ್ ಮುಸ್ಲಿಯಾರ್ ವಂದಿಸಿ, ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.