ಜೀವನೋತ್ಸವವನ್ನು ಉಳಿಸಿಕೊಂಡು ಆಧ್ಯಾತ್ಮಿಕ ಚಿಂತನೆಯನ್ನು ಮೈಗೂಡಿಸಿಕೊಂಡು ಭವಿಷ್ಯದ ಕಲ್ಪನೆಯೊಂದಿಗೆ ನೆಮ್ಮದಿಯ ಜೀವನ ರೂಪಿಸಿಕೊಳ್ಳಬೇಕು ಎಂದು ಪ್ರೋ.ಅನಂತಪದ್ಮನಾಭ ಹೇಳಿದ್ದಾರೆ.
ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆದ ಬಂಟ್ವಾಳ ತಾಲೂಕು ಪಿಂಚಣಿದಾರರ ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಹಾಪ್ರಬಂಧಕರಾದ ಪ್ರೀತಿಕಾಂತ್ ಪಾಂಡ ಮಾತನಾಡಿ,ಪಿಂಚಣಿದಾರರಿಗೆ ಬ್ಯಾಂಕ್ ವ್ಯವಹಾರಕ್ಕೆ ಸಂಬಂಧಿಸಿ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆಯಿತ್ತರು.
ಬಂಟ್ವಾಳ ತಾಲೂಕು ಪಿಂಚಣಿದಾರರ ಸಂಘದ ಅಧ್ಯಕ್ಷ ಲೋಕನಾಥ ಶೆಟ್ಟಿ ಸಭಾಧ್ಯಕ್ಷತೆ ವಹಿಸಿ ಸಂಘಟನೆಯ ಮೂಲಕ ಪಿಂಚಣಿದಾರರ ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತಿದೆ. ಎಲ್ಲಾ ಸದಸ್ಯರು ಸಂತೋಷದಿಂದಿರಬೇಕೆಂಬ ಉದ್ದೇಶದಿಂದ ಸಂಘದಲ್ಲಿ ವಿವಿಧ ಚಟುವಟಿಕೆಯನ್ನು ನಡೆಸಲಾಗುತ್ತಿದೆ ಎಂದರು.
75 ವರ್ಷ ಪೂರೈಸಿದ ಸದಸ್ಯರಾದ ಪಿ.ಎಸ್.ಪದ್ಮನಾಭ, ರಾಮಪ್ಪ ಪೂಜಾರಿ, ರಘರಾಮ ಅಮ್ಟೂರು, ಎಂ.ಸುಬ್ರಹ್ಮಣ್ಯ ಭಟ್, ಈಶ್ವರ ಭಟ್, ವಿದ್ಯಾವತಿ ನೇರಳಕಟ್ಟೆ, ಚಂದು ನಾಯ್ಕ ಸಜೀಪಮುನ್ನೂರು, ಎಂ.ಶಾಂತಕುಮಾರಿ, ಗಣಪತಿಭಟ್ ಮಂಗಳಗಂಗೋತ್ರಿ ಅವರನ್ನು ಸನ್ಮಾನಿಸಲಾಯಿತು.
ಉಪಾಧ್ಯಕ್ಷರಾದ ಡಾ.ಪ್ರೊ..ತುಕರಾಮ್ ಪೂಜಾರಿ, ಮಧುಕರ ಮಲ್ಯ, ದ.ಕ.ಜಿಲ್ಲಾ ನಿವೃತ್ತ ರಾಜ್ಯ ಸರಕಾರಿ ನೌಕರರ ಸಂಘದ ಜತೆ ಕಾರ್ಯದರ್ಶಿ ರತ್ನಾ,ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬಿ.ಸಿ.ರೋಡು ಶಾಖೆಯ ಅಸಿಸ್ಟೆಂಟ್ ಮೆನೇಜರ್ ರಾಜೇಶ್ ಕುಮಾರ್ ವೇದಿಕೆಯಲ್ಲಿದ್ದರು. ಎಂ.ಆರ್.ನಾಯರ್,ದಿನಕರ್,ಎನ್.ಶಿವಶಂಕರ್ ಸನ್ಮಾನಿತರ ಪಟ್ಟಿ ವಾಚಿಸಿದರು. ನಿವೃತ್ತ ಶಿಕ್ಷಕ ಶೇಷಪ್ಪ ಮಾಸ್ಟರ್ ಸ್ವಾಗತಿಸಿದರು. ಕಾರ್ಯದರ್ಶಿ ನೀಲೋಜಿರಾವ್ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಜಲಜಾಕ್ಷಿ ಕುಲಾಲ್ ಲೆಕ್ಕಪತ್ರ ಮಂಡಿಸಿದರು.ನಿವೃತ್ತ ಶಿಕ್ಷಕ ಮಹಾಬಲೇಶ್ವರ ಹೆಬ್ಬಾರ್ ವಂದಿಸಿದರು.ಜಯರಾಮ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.