ಪ್ರಯಾಣಿಕರೋರ್ವರ ಪರ್ಸ್ ಕದ್ದ ವ್ಯಕ್ತಿಯೋರ್ವ ಪೊಲೀಸರ ವಶದಲ್ಲಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಕಾಸರಗೋಡು ಜಿಲ್ಲೆಯ ಉದುಮಾ ನಿವಾಸಿ ನಜೀರ್ ಎಂಬ ವ್ಯಕ್ತಿ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಪುತ್ತೂರು ನಿವಾಸಿ ಕರುಣಾಕರ ಎಂಬವರ ಪ್ಯಾಂಟ್ ನ ಕಿಸೆಯಿಂದ ಹಣದ ಪಾಕೆಟ್ ಕದ್ದೊಯ್ದ ಕುರಿತು ಆರೋಪಿಸಲಾಗಿದೆ.
ಕರುಣಾಕರ ಅವರು ಬಿಸಿರೋಡಿನಿಂದ ಪುತ್ತೂರಿಗೆ ತೆರಳುವುದಕ್ಕೆ ಬಿಸಿರೋಡಿನಲ್ಲಿ ಖಾಸಗಿ ಬಸ್ ಹತ್ತಿದ್ದರು. ಬಸ್ ತುಂಬಾ ಪ್ರಯಾಣಿಕರು ಇದ್ದ ಕಾರಣ ಇವರು ನಿಂತುಕೊಂಡಿದ್ದರು. ಈ ಸಂದರ್ಭ ಬಸ್ಸಿನಲ್ಲಿದ್ದ ನಜೀರ್, ಬಸ್ಸು ಬಿಸಿರೋಡಿನಿಂದ ಪಾಣೆಮಂಗಳೂರು ತಲುಪುತ್ತಿದ್ದಂತೆ ಕರುಣಾಕರ ಅವರ ಪ್ಯಾಂಟ್ ನ ಹಿಂಬದಿಯಲ್ಲಿ ಇರಿಸಿದ್ದ ಹಣದ ಪರ್ಸ್ ನ್ನು ಕಿತ್ತುಕೊಂಡು ಬಸ್ ನಿಂದ ಇಳಿದಿದ್ದಾನೆ. ಈತ ಪರ್ಸ್ ಎಗರಿಸುವುದನ್ನು ಬಸ್ ನೊಳಗಿದ್ದ ಪ್ರಯಾಣಿಕನೋರ್ವ ನೋಡಿದ್ದು, ಕೂಡಲೇ ಕರುಣಾಕರ ಅವರಿಗೆ ತಿಳಿಸಿದ್ದಾನೆ. ಕಳ್ಳ ಬಸ್ ನಿಂದ ಇಳಿದು ಹೋಗುವುದನ್ನು ಗಮನಿಸಿ ಕರುಣಾಕರ ಕೂಡ ಇಳಿದಿದ್ದಾರೆ.ಅದಾಗಲೇ ನಜೀರ್ ಕೆ.ಎಸ್.ಆರ್.ಟಿ.ಸಿ.ಬಸ್ ಹತ್ತಿ ಬಿಸಿರೋಡು ಕಡೆಗೆ ತೆರಳಿದ್ದಾನೆ. ಇವರು ಖಾಸಗಿ ಬಸ್ ನಲ್ಲಿ ಬಿಸಿರೋಡಿನ ಕಡೆ ತೆರಳಿದ್ದಾರೆ. ಸಂಬಂಧಿಕರೋರ್ವರ ಮೂಲಕ ಬಿಸಿರೋಡಿನ ಪಾಯಿಂಟ್ ನಲ್ಲಿದ್ದ ಪೋಲೀಸ್ ಸಿಬ್ಬಂದಿ ರಾಕೇಶ್ ಎಂಬವರಿಗೆ ನಡೆದ ವಿಚಾರ ತಿಳಿಸಿದ್ದು, ಬಸ್ ನಲ್ಲಿ ಬಿಸಿರೋಡು ಕಡೆಗೆ ಬರುವುದನ್ನು ತಿಳಿಸಿದ್ದಾರೆ. ನಜೀರ್ ಬಿಸಿರೋಡಿನ ಬಸ್ ನಿಲ್ದಾಣದಲ್ಲಿ ಇಳಿದು ಕಾಸರಗೋಡು ಬಸ್ ಗಾಗಿ ತೆರಳುವ ವೇಳೆ ಟ್ರಾಫಿಕ್ ಪೋಲೀಸ್ ರಾಕೇಶ್ ಅವರ ಕೈ ಸಿಕ್ಕಿದ್ದಾನೆ. ಈತನನ್ನು ನಗರ ಪೋಲೀಸ್ ಠಾಣೆಗೆ ಒಪ್ಪಿಸಿದ್ದು,ವಿಚಾರಣೆ ನಡೆಸುತ್ತಿದ್ದಾರೆ.
ಕೆ.ಎನ್.ಆರ್. ಕನ್ಸಸ್ಟ್ರಕ್ಷನ್ಸ್ ಗುತ್ತಿಗೆ ವಹಿಸಿಕೊಂಡಿರುವ ಬಿ.ಸಿ.ರೋಡ್ ಭಾಗದ ಕಾಮಗಾರಿಯಲ್ಲಿ ಸೇತುವೆ ಪೂರ್ಣಗೊಳಿಸಿ ಓಡಾಟ ಆರಂಭಗೊಂಡಿರುವುದು ಮಹತ್ವದ ಹೆಜ್ಜೆಯಾಗಿದ್ದು, ಬಿ.ಸಿ.ರೋಡ್ ಸರ್ಕಲ್…