ಮೈಸೂರಿನಲ್ಲಿರುವ ಸೆಂಟ್ರಲ್ ಇನ್ಸ್ಟಿಟ್ಯೂಟ್ ಟ್ಯೂಟ್ ಆಫ್ ಇಂಡಿಯನ್ ಲ್ಯಾಂಗ್ವೇಜಸ್(ಸಿಐಐಎಲ್)ನ ರಾಷ್ಟ್ರೀಯ ಪರೀಕ್ಷಣ ಸೇವೆ(ಎನ್‌ಟಿಎಸ್) ಆಯೋಜಿಸಿದ ಹದಿನೈದು ದಿನಗಳ ಕನ್ನಡ ಭಾಷೆ ಮತ್ತು ಸಾಹಿತ್ಯ ಕುರಿತ ಪ್ರಶ್ನಾಂಶ ಬರವಣಿಗೆಯ ಮ್ಯಾರಥಾನ್‌ನಲ್ಲಿ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಸ್ವಾಯತ್ತ ಮಹಾವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಮೈತ್ರಿ ಭಟ್ ಪ್ರಥಮ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಇವರು ವಿಟ್ಲದಲ್ಲಿರುವ ರವಿಶಂಕರ ಕುಳಮರ್ವ ಅವರ ಪತ್ನಿ.