ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಿದರು. ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್, ತಾಂತ್ರಿಕ ಸಮಿತಿ ಸೂಚಿಸಿದ್ರೆ ಮಾತ್ರ ವ್ಯಾಕ್ಸಿನೇಷನ್ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಯಾವುದೇ ಕಾರ್ಯಕ್ರಮ ನಿಲ್ಲಿಸುವ ನಿರ್ಧಾರ ಮಾಡಿಲ್ಲ
ಯಾವುದೇ ಕಾರ್ಯಕ್ರಮಗಳನ್ನಾಗಲೀ ನಿಲ್ಲಿಸುವ ನಿರ್ಧಾರಗಳನ್ನು ನಾವು ಮಾಡಿಲ್ಲ. ಎಲ್ಲ ಪೂರ್ವನಿಗದಿತ ಕಾರ್ಯಕ್ರಮಗಳಿಗೆ ಬಾಧೆ ಇಲ್ಲ. ಆದರೆ ಮುಂಜಾಗರೂಕತೆ ಪಾಲಿಸಿಕೊಳ್ಳಿ ಎಂದು ಸಲಹೆ ನೀಡಿದ ದಿನೇಶ್, ಇಲ್ಲಿಯವರೆಗೆ ಎಲ್ಲವೂ ಸಹಜ ಸ್ಥಿತಿಯಲ್ಲಿ ಇರಲಿದೆ ಈ ಕೋವಿಡ್ ಅಪಾಯಕಾರಿ ಆಗಿ ಇರಲ್ಲ, ಯಾರಿಗೂ ಹೆಚ್ವು ಅಪಾಯ ಇಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿ, ಈ ಬಗ್ಗೆ ಮೆಡಿಕಲ್ ತಾಂತ್ರಿಕ ಸಮಿತಿಗಳು ಈಗಾಗಲೇ ಹೇಳಿದೆ ಎಂದು ಖಚಿತಪಡಿಸಿದರು.
ಕ್ರಿಸ್ ಮಸ್, ಹೊಸ ವರ್ಷಕ್ಕೆ ಯಾವುದೇ ಹೊಸ ಗೈಡ್ ಲೈನ್ಸ್ ಇಲ್ಲ.
ಆದರೆ ಜನ ಇರೋ ಪ್ರದೇಶಗಳಲ್ಲಿ ಮಾಸ್ಕ್ ಧರಿಸಲು ಸಲಹೆ ಕೊಡ್ತೇವೆ ಆದರೆ ಯಾವುದೂ ಕಡ್ಡಾಯ ಅಲ್ಲ, ನಾವು ಯಾವುದೇ ನಿರ್ಬಂಧ ವಿಧಿಸಲ್ಲ ಈ ಉಪತಳಿ ಬಗ್ಗೆ ಆತಂಕ ಪಡೋ ಯಾವುದೇ ಅವಶ್ಯಕತೆ ಇಲ್ಲ ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ಪ್ರಕಾರ ಅಷ್ಟು ತೀವ್ರವಾಗಿಲ್ಲ ನಾವು ಯಾವುದನ್ನೂ ಎಲ್ಲೂ ಕಡ್ಡಾಯ ಅಂತ ಮಾಡಿಲ್ಲ ಆದರೆ ಹೆಚ್ಚು ಕಡಿಮೆ ಆಗದಂತೆ ಪೂರ್ವ ಸಿದ್ದತೆ ಮಾಡ್ತಾ ಇದೀವಿ ಈ ಮೂಲಕ ನಮ್ಮ ವ್ಯವಸ್ಥೆ ಕೂಡ ಒಮ್ಮೆ ಮತ್ತೆ ಪರೀಕ್ಷೆಗೆ ಒಳ ಪಡುತ್ತೆ ಇದರಿಂದ ನಾವು ಇನ್ನಷ್ಟು ಸುಸಜ್ಜಿತವಾಗಿ ಇರಲು ಸಾಧ್ಯವಾಗಲಿದೆ ಎಂದು ಆರೋಗ್ಯಸಚಿವರು ತಿಳಿಸಿದ್ದಾರೆ.
ಸಂಪುಟ ಉಪಸಮಿತಿ ತಜ್ಞರ ವರದಿ ಪಡೆದು ಮುಂದೇನು ಎಂಬ ಕುರಿತು ನಿರ್ಧಾರ ಮಾಡಲಿದೆ ಎಂದ ದಿನೇಶ್, ರಾಜ್ಯದಲ್ಲಿ ಸದ್ಯ ಐದು ಸಾವಿರ ಟೆಸ್ಟಿಂಗ್ ಟಾರ್ಗೆಟ್ ನೀಡಲಾಗಿದೆ, ಹೆಚ್ಚು ಟೆಸ್ಟಿಂಗ್ ಮಾಡೋ ಅಗತ್ಯ ಇದ್ಯಾ ಅಂತ ನಿರ್ಧಾರ ಮಾಡ್ತೇವೆ ಗಡಿ ಜಿಲ್ಲೆಯಾದ ಮಂಗಳೂರು, ಮೈಸೂರಿಗೆ ಹೆಚ್ಚು ನೀಡಲಾಗಿದೆವೆಂಟಿಲೇಟರ್ ಕಾರ್ಯನಿರ್ವಹಣೆ ಪರೀಕ್ಷೆ ಬಗ್ಗೆ ಕ್ರಮ ವಹಿಸುತ್ತೇವೆ, ಸರ್ಕಾರಿ ಆಸ್ಪತ್ರೆಗಳಿಗೆ ಪಿಪಿಇ ಕಿಟ್ ಪೂರೈಕೆ ಕೆಲಸ ಆಗ್ತಿದೆ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮತ್ತು ಗೈಡ್ ಲೈನ್ಸ್ ಗಳ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದರು.