ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಶಾಂತಿಗೋಡಿನಲ್ಲಿ ನೆಲೆಸಿರುವ ಚಿಂತಕ, ವಾಗ್ಮಿ ಲಕ್ಷ್ಮೀಶ ತೋಳ್ಪಾಡಿ ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಸಾಹಿತ್ಯ ಅಕಾಡೆಮಿ ಬುಧವಾರ ಪ್ರಕಟಿಸಿದ ಅಕಾಡೆಮಿ ಪ್ರಶಸ್ತಿಗಳಲ್ಲಿ 9 ಕವನ, 6 ಕಾದಂಬರಿ, 5 ಸಣ್ಣ ಕಥೆ, 3 ಪ್ರಬಂಧ ಮತ್ತು 1 ಸಾಹಿತ್ಯ ಅಧ್ಯಯನ ಸೇರಿದ್ದು, ತೋಳ್ಪಾಡಿ ಅವರು ಬರೆದ ಮಹಾಭಾರತ ಅನುಸಂಧಾನದ ಭಾರತಯಾತ್ರೆ ಪ್ರಬಂಧಗಳಿಗೆ ಈ ಗೌರವ ಲಭಿಸಿದೆ.
ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮಾಧವ ಕೌಶಿಕ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 24 ಭಾರತೀಯ ಭಾಷೆಗಳಲ್ಲಿ ತೀರ್ಪುಗಾರ ಸದಸ್ಯರು ಶಿಫಾರಸು ಮಾಡಿದ ಪ್ರಶಸ್ತಿಗಳನ್ನು ಸಾಹಿತ್ಯ ಅಕಾಡೆಮಿ ಕಾರ್ಯಕಾರಿ ಮಂಡಳಿ ಅನುಮೋದಿಸಿತು. ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ವಿಭಾಗದ ಆಯ್ಕೆ ಸಮಿತಿಯಲ್ಲಿ ನಾಗೇಶ ಹೆಗಡೆ, ಆನಂದ ಝಂಜರವಾಡ, ಜ.ನಾ ತೇಜಶ್ರೀ ಇದ್ದರು.