ಪ್ರಮುಖ ಸುದ್ದಿಗಳು

ಕುಡಿದ ಮತ್ತಿನಲ್ಲಿ ಪತ್ನಿಗೆ ಹಲ್ಲೆ, ಕಚ್ಚಿ ಮುಖ ವಿರೂಪಗೊಳಿಸಿದ ಪತಿ, ಮಗಳಿಗೂ ಹಲ್ಲೆ, ಆರೋಪಿ ಬಂಧನ

ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ತನ್ನ ಪತ್ನಿ ಮತ್ತು ಮಗಳ ಮೇಲೆ ಮರಣಾಂತಿಕವಾಗಿ ಹಲ್ಲೆ ನಡೆಸಿ ಮುಖದ ಭಾಗಕ್ಕೆ ಕಚ್ಚಿ ಮಾಂಸ ಹೊರತೆಗೆದ ಘಟನೆ ಸೋಮವಾರ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದಲ್ಲಿ ನಡೆದಿದೆ.

ಜಾಹೀರಾತು

ಮೂಲತಃ ಹಾವೇರಿ ಜಿಲ್ಲೆಯ ನಿವಾಸಿ ಸುರೇಶ್ ಗೌಡ(55) ಬಂಧಿತ ಆರೋಪಿ.

ಈತ ಶಿಶಿಲ ಸಮೀಪ ಕೋಟೆಬಾಗಿಲಿನಲ್ಲಿ ತನ್ನ ಪತ್ನಿಯ ತಂದೆ ನೀಡಿದ ಜಾಗದಲ್ಲಿ ಮನೆ ಮಾಡಿ ವಾಸವಾಗಿದ್ದ, ಸೋಮವಾರ ರಾತ್ರಿ ಮದ್ಯ ಸೇವಿಸಿ ಬಂದು ಪತ್ನಿಯ ಮೇಲೆ ಹಲ್ಲೆ ಮಾಡಿ ಮುಖದ ಭಾಗಕ್ಕೆ ಕಚ್ಚಿ ಮಾಂಸ ಹೊರತೆಗೆದು, ಕಣ್ಣಿಗೂ ಕಚ್ಚಿ ಬಳಿಕ ಕೋಲಿನಿಂದ ಹೊಡೆದು ಎಡ ಭಾಗದ ಕಣ್ಣನ್ನು ಸಂಪೂರ್ಣ ಹಾನಿಗೊಳಿಸಿದ್ದಾನೆ. ಮಗಳ ತಲೆಯ ಭಾಗಕ್ಕೆ ಮತ್ತು ಕಣ್ಣಿಗೆ ಹೊಡೆದಿದ್ದು ಇಬ್ಬರಿಗೂ ಮಾರಣಾಂತಿಕ ರೀತಿಯಲ್ಲಿ ಹಲ್ಲೆ ನಡೆಸಿದ್ದಾನೆ. ತಂದೆಯ ಹೊಡೆತದಿಂದ ತಪ್ಪಿಸಿಕೊಂಡ ಮಗಳು ನೆರೆಮನೆಗೆ ಓಡಿ ವಿಷಯ ತಿಳಿಸಿದ್ದಾಳೆ. ಈ ಸಂದರ್ಭ ಆರೋಪಿ ಸುರೇಶ್ ತೋಟದೊಳಗೆ ತಪ್ಪಿಸಿಕೊಂಡಿದ್ದಾನೆ. ಸ್ಥಳಕ್ಕೆ ಬಂದ ನೆರೆಮನೆಯವರು, ವಿಪತ್ತು ನಿರ್ವಹಣಾ ತಂಡ ಹಾಗೂ ಪೊಲೀಸರು ಆರೋಪಿ ಸುರೇಶ್‌ನನ್ನು ಹುಡುಕಾಡಿದ್ದಾರೆ. ಕೊನೆಗೂ ಸತತ ಹುಡುಕಾಟದ ಬಳಿಕ ಆರೋಪಿ ಸಿಕ್ಕಿಬಿದ್ದಿದ್ದಾನೆ. ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಬಂಧಿಸಿದ್ದಾರೆ. ಸದ್ಯ ವಿಪರೀತ ಗಾಯಗೊಂಡ ತಾಯಿ ಮಗಳು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯ ಪೊಲೀಸರು ತಾಯಿ ಮಗಳ ಹೇಳಿಕೆ ಪಡೆದುಕೊಂಡು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ 108/2023 ಕಲಂ: 323,324,326,504,506 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿ ಪ್ರಕರಣದ ಆರೋಪಿಯ ಪತ್ತೆಗಾಗಿ ತಕ್ಷಣ ಕಾರ್ಯಪ್ರವೃತ್ತರಾದ ಧರ್ಮಸ್ಥಳ ಪೊಲೀಸ್ ಠಾಣಾ ಪಿ.ಎಸ್.ಐ ಶ್ರೀ ಅನೀಲ್ ಕುಮಾರ್.ಡಿ, ಪಿ,ಎಸ್,ಐ ಸಮರ್ಥ ರವೀಂದ್ರ ಗಾಣಿಗೇರ ಮತ್ತು ಸಿಬ್ಬಂದಿಗಳಾದ ಹೆಚ್.ಸಿ ಶಶಿಧರ , ಪಿ.ಸಿ ಮಲ್ಲಿಕಾರ್ಜುನ ರವರುಗಳ ತಂಡವು, ಬೆಳ್ತಂಗಡಿ ಶಿಶಿಲ ಎಂಬಲ್ಲಿ ಆರೋಪಿ ಬೆಳ್ತಂಗಡಿ ಶಿಶಿಲ ಗ್ರಾಮದ ಸುರೇಶ್ ಗೌಡ (56) ನನ್ನು ವಶಕ್ಕೆ ಪಡೆದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts