ವಿಟ್ಲ

ಇತಿಹಾಸ ಪ್ರಸಿದ್ಧ ಕೇಪು ಕಜಂಬು ಜಾತ್ರೆ

ಇತಿಹಾಸ ಪ್ರಸಿದ್ಧ ಕೇಪು ಉಳ್ಳಾಳ್ತಿ ಕಜಂಬು ಉತ್ಸವ ಡಿ. 17ರಂದು ನಡೆಯಿತು. ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.ಡಿ. 16ರಂದು ಧ್ವಜಾರೋಹಣದೊಂದಿಗೆ ಕಾಲಾವಧಿ ಉತ್ಸವ ಆರಂಭಗೊಂಡಿತ್ತು. ಡಿ. 20ರ ತನಕ‌ ಉತ್ಸವ ನಡೆಯಲಿದೆ.

ಡಿ. 24ರಂದು ಚಾವಡಿಕೊಟ್ಯ ದಲ್ಲಿ ಮಲರಾಯಿ ಮತ್ತು ಪಿಲಿ ಚಾಮುಂಡಿ ದೈವಗಳ ನೇಮ ಜರಗಲಿದೆ.ಬಂಟ್ವಾಳ ತಾಲೂಕು ವಿಟ್ಲ ಸೀಮೆಯ ಕೇಪು ಗ್ರಾಮದ… ದೊಂಬು ಹೆಗ್ಗಡೆ ಮನೆತನದ ಆಡಳಿತದಲ್ಲಿರುವ‌ಹದಿನಾರು ಗ್ರಾಮದ ಹದಿನಾರು ದೈವ ದೇವಸಾನದಲ್ಲಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಾನದಲ್ಲಿ… ಈರ್ವೆರ್ ಉಳ್ಳಾಲ್ತಿಗಳ ಆಶೀರ್ವಾದವನ್ನು ಪಡೆದುಕೊಳ್ಳುವ… ಸುಮಾರು 800 ವರುಷಗಳ ಇತಿಹಾಸದ ಹಿರಿಮೆಯುಳ್ಳ ಕಜಂಬು ಉತ್ಸವ .ಈ ಸಾಂಪ್ರದಾಯಿಕ ವಿಧಿವಿಧಾನ ಸಣ್ಣ ಮಕ್ಕಳಿರುವಾಗಲೇ ನಡೆಯುತ್ತದೆ. ತೀರಾ ಅಪರೂಪದಲ್ಲಿ…ಸಣ್ಣವರಿರುವಾಗಲೇ ಮಾಡದೇ ಉಳಿದಿದ್ದಲ್ಲಿ… ಮದುವೆಗೆ ಮೊದಲು ಮಾಡಿಯೇ ಬಿಡಬೇಕು ಈ ಸಾಂಪ್ರದಾಯಿಕ ವಿಧಿವಿಧಾನ ಆಚರಣೆ ವಂಶಪಾರಂಪರ್ಯವಾಗಿ ಮುಂದುವರಿಯುತ್ತದೆ. ಈ ಉತ್ಸವದ ವೈಶಿಷ್ಟ್ಯತೆಯೇನೆಂದರೆ… ಕೇಪು ಗ್ರಾಮಕ್ಕೆ ಸಂಬಂಧಪಟ್ಟವರ ಮಕ್ಕಳಿಗೆ ಮಾತ್ರ ಈ ಆಚರಣೆಗೆ ಒಳಗೊಳ್ಳಲು ಅವಕಾಶ… ಹೊರಗಿನವರಿಗೆ ಅವಕಾಶ ಇಲ್ಲ

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts