ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದಲ್ಲಿರುವ ಶ್ರೀರಾಮ ವಿದ್ಯಾಕೇಂದ್ರದ ಹೊನಲು ಬೆಳಕಿನ ಕ್ರೀಡೋತ್ಸವ ಕಲ್ಲಡ್ಕದ ಹನುಮಾನ್ ನಗರದ ವಿಶಾಮ ಮೈದಾನದಲ್ಲಿ ಶನಿವಾರ ಸಂಜೆ ನಡೆದಿದ್ದು, ರಾತ್ರಿಯವರೆಗೆ ನಡೆದ ನಾನಾ ಸಾಹಸ ಚಟುವಟಿಕೆಗಳಲ್ಲಿ ಸಂಸ್ಥೆಯ ಪೂರ್ವ ಪ್ರಾಥಮಿಕದಿಂದ ತೊಡಗಿ, ಪದವಿ ವಿದ್ಯಾರ್ಥಿಗಳವರೆಗೆ 3500ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡರು. ಈ ಸಂದರ್ಭ ರಾಮಮಂದಿರ ರಚನೆ ಪೂರ್ಣಗೊಂಡ ಬಳಿಕದ ಸನ್ನಿವೇಶದ ಚಿತ್ರಣವೂ ನಡೆಯಿತು. ಈ ಕುರಿತು ಚಿತ್ರಸಂಚಯ ಕೆಳಗಿದೆ (ಚಿತ್ರಕೃಪೆ: ಕಿಶೋರ್ ಪೆರಾಜೆ)
ಮಾಜಿ ಸಿಎಂ ಕುಮಾರಸ್ವಾಮಿ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ನೂರಾರು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸಂಸ್ಥೆ ಸಂಸ್ಥಾಪಕ ಹಿರಿಯ ಆರೆಸ್ಸೆಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಪ್ರಸ್ತಾವಿಸಿದರು.
ವಿ.ಪ.ಸದಸ್ಯರಾದ ಕೋಟಾ ಶ್ರೀನಿವಾಸ ಪೂಜಾರಿ,ಎಸ್.ಎಲ್, ಬೋಜೇಗೌಡ, ಶಾಸಕರುಗಳಾದ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು,ಗುರುರಾಜ್ ಗಂಟಿಹೊಳೆ,ಉಮಾನಾಥ ಕೋಟ್ಯಾನ್ ,ಭಾಗಿರಥಿ ಮುರುಳ್ಯ,ಯಶ್ಪಾಲ್ ಸುವರ್ಣ, ವೇದವ್ಯಾಸ ಕಾಮತ್ ,ಧೀರಾಜ್ ಮುನಿರಾಜ್,ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮಾಜಿ ಸಚಿವರಾದ ಕೃಷ್ಣಪಾಲೇಮಾರ್,ನಾಗರಾಜಶೆಟ್ಟಿ, ಪ್ರಮೋದ್ ಮಧ್ವರಾಜ್ ,ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ,ಮಾಜಿ ಜಿ.ಪಂ.ಸದಸ್ಯ ಚೆನ್ನಪ್ಪಕೋಟ್ಯಾನ್,ಕಮಲಾ ಪ್ರಭಾಕರ ಭಟ್ , ಮುಂಬೈ ನ್ಯಾಚುರಲ್ ಐಸ್ ಕ್ರೀಂನ ಆಡಳಿತ ನಿರ್ದೇಶಕರಾದ ರಘನಂದನ್ ಕಾಮತ್,ಮುಂಬೈ ಜಾಗತಿಕಮಲ್ಲಕಂಬದ ಕಾರ್ಯದರ್ಶಿ ಉದಯ ವಿ.ದೇಶಪಾಂಡೆ,ಮುಂಬೈಯ ,ಬೆಂಗಳೂರು ಯೂತ್ ಫಾರ್ ಸೇವಾ ಸಂಸ್ಥೆಯ ಮುಖ್ಯಕಾರ್ಯ ನಿರ್ವಾಹಕರಾದ ವೆಂಕಟೇಶ್ ಮೂರ್ತಿ,ಪರಿಮಳ ವಿ.ಮೂರ್ತಿ,ಉದ್ಯಮಿಗಳಾದ ಸಂಜೀತ್ ಶೆಟ್ಟಿ,ಸುಖಾನಂದ ಶೆಟ್ಟಿ,ಯದುನಾರಾಯಣ ಶೆಟ್ಟಿ,ಗಣೇಶಾನಂದ ಸೋಮಾಯಾಜಿ,ಕೂಳೂರು ಸದಾಶಿವ ಶೆಟ್ಟಿ,ಬರಿಮಾರುಗಣೇಶ,ಕಿರಣ್ ಕುಮಾರ್ ಗಂಗಾವತಿ,ಸಾಧುಸಾಲ್ಯಾನ್,ಪತ್ರಕರ್ತ ಜಿತೇಂದ್ರ ಕುಂದೇಶ್ವರ,ಇಸ್ರೋ ವಿಜ್ಞಾನಿ ಪ್ರೋ.ನಾಗೇಂದ್ರಯ್ಯ,ಕರ್ನಬದುಕಿನ ಕ್ ಕಿಣಿ ಸೇರಿದಂತೆ 100 ಕ್ಕು ಹೆಚ್ಚು ವಿವಿಧ ಕ್ಷೇತ್ರದ ಪ್ರಮುಖರು ಭಾಗವಹಿಸಿದ್ದರು. ಶಾಲೆಯ ಸಂಸ್ಥಾಪಕ,ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಅವರು ಪ್ರಸ್ತಾವಿಸಿ,ಸ್ವಾಗತಿಸಿದರು.ಶಾಲಾ ಆಡಳಿತ ಸಮಿತಿ ಅಧ್ಯಕ್ಷ ನಾರಾಯಣ ಸೋಮಯಾಜಿ,ಸಂಚಾಲಕ ವಸಂತಮಾಧವ,ಸಹಸಂಚಾಲಕ ರಮೇಶ್ ಉಪಸ್ಥಿತರಿದ್ದರು.ರಾಷ್ಟ್ರಮಟ್ಟದಲ್
PHOTO: KISHORE PERAJE
ಶಿಶು ನೃತ್ಯದಲ್ಲಿ ಸಂಸ್ಕೃತ ಹಾಡಿಗೆ ನೃತ್ಯ, ಘೋಷ್ ಪ್ರದರ್ಶನ, ಜಡೆ ಕೋಲಾಟ, ನಿಯುದ್ಧ, ದೀಪಾರತಿಗಳು ನಡೆದ ಬಳಿಕ ಯೋಗಾಸನದ ಮೂಲಕ ವಿವಿಧ ಯೋಗಗುಚ್ಛಗಳನ್ನು ರಚಿಸಲಾಯಿತು.
ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಜಾನಪದ ಹಾಡಿಗೆ ಹೆಜ್ಜೆ ಹಾಕಿ ಶಿವಲಿಂಗ, ರಥ, ತಾವರೆ ರಚನೆಗಳೊಂದಿಗೆ ಕಂಗೊಳಿಸಿದರು. ಮೆನ್ಪುರಿ, ನೃತ್ಯ ಭಜನೆಯ ಬಳಿಕ ಮಲ್ಲಕಂಭದ ಮೂಲಕ ತಿರುಗುವ ಕಂಬದೊಂದಿಗೆ ಸಾಹಸ ಪ್ರದರ್ಶನ ನೀಡಿದರು.
ಬಳಿಕ ಟಿಕ್ ಟಿಕ್ ಪ್ರದರ್ಶನ, ನೃತ್ಯ ವೈವಿಧ್ಯಗಳು, ಚಕ್ರ ಸಮತೋಲನ ನಡೆದವು. ಟ್ಯೂಬ್ ಲೈಟ್ ಸಾಲನ್ನು ಎದೆಯೊಡ್ಡಿ ಏಕಚಕ್ರ ಸೈಕಲ್ ಸವಾರಿ ಸಾಗುವ ದೃಶ್ಯ ಗಮನ ಸೆಳೆಯಿತು. ಬೆಂಕಿಯೊಂದಿಗೆ ತಾಲೀಮುಗಳು ಮೈನವಿರೇಳಿಸುವಂತೆ ಮಾಡಿದವು. ಕೇರಳ ಶೈಲಿ ಚೆಂಡೆ, ಡೋಲುಗಳ ವಾದ್ಯ ವಿಶೇಷ, ಕಾಲ್ಚಕ್ರ, ಕೂಪಿಕಾ ಸಮತೋಲನದ ಪ್ರದರ್ಶನಗಳು ಗಮನ ಸೆಳೆದವು.,, ಬಳಿಕ ಪ್ರೌಢಶಾಲೆಯ ವಿದ್ಯಾರ್ಥಿಗಳು ರಂಗೋಲಿಗಳ ಚಿತ್ತಾರ ಮಾಡಿದರೆ, ಚಂದ್ರಯಾನ 3 ಭಾರತ ಸಾಧನೆ ಪ್ರದರ್ಶನ ನೀಡಿದ್ದು ಗಮನ ಸೆಳೆಯಿತು.