ಕಲ್ಲಡ್ಕ

ಮಂಗಳೂರು ಹವ್ಯಕ ಮಂಡಲದ ‘ಮಂಡಲೋತ್ಸವ’

ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಶ್ರೀ ಉಮಾಶಿವ ಕ್ಷೇತ್ರದ ಸಹಕಾರದೊಂದಿಗೆ ಮಂಗಳೂರು ಮಂಡಲದ 12 ವಲಯಗಳ ಹವ್ಯಕ ಮಂಡಲೋತ್ಸವ ನಡೆಯಿತು.

ಹವ್ಯಕ ವಿದ್ಯಾರ್ಥಿ ಮತ್ತು ಯುವ ವಿಭಾಗಗಳು ಕಾರ್ಯಕ್ರಮದ ನೇತೃತ್ವ ವಹಿಸಿದ್ದವು. ಬೆಳಗ್ಗೆ ಶ್ರೀ ಉಮಾಶಿವ ಕ್ಷೇತ್ರದಲ್ಲಿ ಕಾರ್ಯಕ್ರಮದ ಯಶಸ್ಸಿಗಾಗಿ ವೇ.ಮೂ. ಅಮೈ ಶಿವಪ್ರಸಾದ ಭಟ್ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ, ರುದ್ರಾಭಿಷೇಕ ಪೂರ್ವಕ ಶಿವಾರಾಧನೆ ಮತ್ತು ಮಾತೆಯರಿಂದ ಕುಂಕುಮಾರ್ಚನೆ ನೆರವೇರಿತು.

ಮಂಡಲೋತ್ಸವವನ್ನು ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ ಉದ್ಘಾಟಿಸಿದರು. ಮಂಗಳೂರು ಹವ್ಯಕ ಮಂಡಲಾಂತರ್ಗತ 12 ವಲಯಗಳಲ್ಲಿ ಒಳಾಂಗಣ ಕ್ರೀಡೆ, ಹೊರಾಂಗಣ ಕ್ರೀಡೆ ಮತ್ತು ಬೌದ್ಧಿಕ ಸ್ಪರ್ಧೆಗಳಲ್ಲಿ ವಿಜೇತರಾಗಿ ಬಂದ ವಿದ್ಯಾರ್ಥಿಗಳು ಯುವಕರು ನೋಂದಾವಣೆ ಮಾಡಿಕೊಂಡು ವಿವಿಧ ಸ್ಪರ್ಧೆಗಳಲ್ಲಿ ಭಾಗಿಯಾದರು. ಇದೇ ಸಂದರ್ಭ ಮಧುಕರ ಸಭಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸುಮಾರು ಒಂದು ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ ಕಾರ್ಯಕ್ರಮದ ಸಮಾರೋಪದ ಅಧ್ಯಕ್ಷತೆಯನ್ನು ಹವ್ಯಕ ಮಂಡಲ ಮಂಗಳೂರು ಅಧ್ಯಕ್ಷರಾದ ಉದಯಶಂಕರ ನೀರ್ಪಾಜೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಆಡಳಿತ ಖಂಡದ ಶ್ರೀಸಂಯೋಜಕ ಹಾಗೂ ಪೆರಾಜೆಯ ಶ್ರೀ ರಾಮಚಂದ್ರಾಪುರಮಠದ ಸೇವಾಸಮಿತಿಯ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ಶುಭಾಶಂಸನೆಗೈದರು. ಹವ್ಯಕ ಮಹಾಮಂಡಲದ ಗೌರವ ಕಾರ್ಯದರ್ಶಿ ಮತ್ತು ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಪ್ರಧಾನ ಕಾರ್ಯದರ್ಶಿ ಪೆದಮಲೆ ನಾಗರಾಜ ಭಟ್, ಹವ್ಯಕ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಶ್ರೀ ಉದಯಶಂಕರ ಭಟ್ ಮಿತ್ತೂರು, ಹವ್ಯಕ ಮಹಾಮಂಡಲದ ಪ್ರಾಂತ ಉಪಾಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ, ಹವ್ಯಕ ಮಹಾಮಂಡಲದ ವಿದ್ಯಾರ್ಥಿವಾಹಿನಿ ಪ್ರಧಾನ ಈಶ್ವರ ಪ್ರಸಾದ ಕನ್ಯಾನ, ಮಂಡಲ ಪ್ರಧಾನ ಗುರಿಕಾರ ಉದಯಕುಮಾರ್ ಭಟ್ ಖಂಡಿಗ, ಪ್ರಾಂತ ಮಾತೃತ್ವಮ್‌ ಅಧ್ಯಕ್ಷೆ ಸುಮಾ ರಮೇಶ್, ಉಮಾಶಿವ ಕ್ಷೇತ್ರ ಸೇವಾ ಸಮಿತಿಯ ಅಧ್ಯಕ್ಷ ರಾಕೋಡಿ ಈಶ್ವರ ಭಟ್ ಉಪಸ್ಥಿತರಿದ್ದರು. ನಾನಾ ಕ್ಷೇತ್ರಗಳ ಸಾಧಕರಾದ ಯಶಸ್ ಭಟ್ ವೈ., ಡಾ. ಶ್ರೀರಕ್ಷಾ, ವೆಂಕಟೇಶ ಪುರಾಣಿಕ ಅವರನ್ನು ಸನ್ಮಾನಿಸಲಾಯಿತು.

ಸಾತ್ವಿಕ್ ಪನೆಯಡ್ಕ, ಸುಘೋಷ್ ರಾಮ ಮತ್ತು ಸುಹೃದ್ ಕೃಷ್ಣ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ನಂತರ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮಂಗಳೂರು ಹವ್ಯಕ ಮಂಡಲದ ಕೋಶಾಧಿಕಾರಿ ಮಹೇಶ್ವರ ಭಟ್ ಕಾಕುಂಜೆ, ಸಂಘಟನಾ ಕಾರ್ಯದರ್ಶಿ ಕೃಷ್ಣಮೂರ್ತಿ ಕಮ್ಮಜೆ, ವಿವಿಧ ವಿಭಾಗ ಪ್ರಧಾನರುಗಳಾದ ಭಾಸ್ಕರ ಹೊಸಮನೆ, ಮಲ್ಲಿಕಾ ಜಿ.ಕೆ. ಭಟ್, ಸುರೇಶ್ ಭಟ್ ಶಾಂತಿಮೂಲೆ, ಪ್ರದೀಪ ಕೊಣಾಜೆ, ಈಶ್ವರ ಭಟ್ ವಾರಣಾಸಿ, ವೀಣಾಸರಸ್ವತೀ ಅಳಕೆಮಜಲು, ಗೀತಾದೇವಿ ಸಿ. ಉಪಸ್ಥಿತರಿದ್ದರು. ಮಂಗಳೂರು ಹವ್ಯಕ ಮಂಡಲ ಉಪಾಧ್ಯಕ್ಷ ರಾಜಶೇಖರ ಭಟ್ ಕಾಕುಂಜೆ ಸ್ವಾಗತಿಸಿದರು. ಸುಮನಾ ನಂದೋಡಿ ನಿರೂಪಿಸಿದರು. ಯುವ ವಿಭಾಗದ ಪ್ರಧಾನ ಕೃಷ್ಣಪ್ರಮೋದ ಶರ್ಮ ಮತ್ತು ವಿದ್ಯಾರ್ಥಿ ವಾಹಿನಿ ಪ್ರಧಾನ ಭಾರ್ಗವಿ ಕೊಲ್ಲೂರು ವಿಜೇತರ ಪಟ್ಟಿ ವಾಚಿಸಿದರು. ಮಂಗಳೂರು ಹವ್ಯಕ ಮಂಡಲ ಕಾರ್ಯದರ್ಶಿ ಸರವು ರಮೇಶ ಭಟ್ ವಂದಿಸಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ