ಮುಂಬಯಿ: ಹಿಂದಿಯ ಜನಪ್ರಿಯ ಧಾರಾವಾಹಿ ಸಿಐಡಿ ಪತ್ತೇದಾರಿ ಕತೆಯ ಮೂಲಕ ಟಿವಿ ಪ್ರೇಕ್ಷಕರನ್ನು ವರ್ಷಗಟ್ಟಲೆ ಹಿಡಿದಿಟ್ಟುಕೊಂಡಿರುವುದು ಗೊತ್ತೇ ಇದೆ. ಅದರಲ್ಲಿ ಸಿಐಟಿ ತಂಡದಲ್ಲಿ ಸ್ವಲ್ಪ ಕಾಮಿಡಿ ಛಾಯೆಯ ಪಾತ್ರಗಳನ್ನು ಮಾಡುತ್ತಾ, ಗಮನ ಸೆಳೆಯುತ್ತಿದ್ದ ದಿನೇಶ್ ಫಡ್ನಿಸ್ ನಿಧನ ಹೊಂದಿದ್ದಾರೆ. ಡಿಸೆಂಬರ್ 1ರಂದು ಅವರಿಗೆ ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ಮುಂಬೈ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಾಲ್ಕು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದಿನೇಶ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ 1966ರಲ್ಲಿ ಜನಿಸಿದ್ದ ದಿನೇಶ್ ಫಡ್ನಿಸ್ ಸಿಐಡಿ ಧಾರಾವಾಹಿಯಲ್ಲಿ ಸುದೀರ್ಘ ಕಾಲ ನಟಿಸುವುದರ ಜೊತೆಗೆ ಬಾಲಿವುಡ್ ಸಿನಿಮಾಗಳಾದ ಸರ್ಫರೋಷ್ (1999)ನಲ್ಲಿ ಇನ್ಸ್ಪೆಕ್ಟರ್ ಪಾತ್ರವನ್ನು ಮಾಡಿದ್ದರು. ಮತ್ತೊಂದು ಚಿತ್ರ ಮೇಳಾ ಹಾಗೂ ಓಫಿಸರ್ ಚಿತ್ರಗಳಲ್ಲಿ ಅವರು ಪೊಲೀಸ್ ಪಾತ್ರವನ್ನು ನಿರ್ವಹಿಸಿದ್ದರು. ಮರಾಠಿ ಸಿನಿಮಾಕ್ಕೂ ಅವರು ಚಿತ್ರಕತೆ ಬರೆದಿದ್ದರು. ಕೆಲವೊಂದು ಸಿಐಡಿ ಎಪಿಸೋಡ್ ಗಳಿಗೆ ಅವರು ಕತೆ ಬರೆದಿದ್ದರು. 1998ರಿಂದ ಸತತವಾಗಿ ಅವರು ಸಿಐಡಿ ಧಾರಾವಾಹಿಯಲ್ಲಿ ಫೆಡ್ರಿಕ್ಸ್ ಪಾತ್ರ ನಿರ್ವಹಿಸಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…