ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಲಕ್ಷದೀಪೋತ್ಸವ ಕಾರ್ಯಕ್ರಮ ನಡೆಯಿತು. ಶನಿವಾರ ಬೆಳಗ್ಗೆ ಮಹಾ ನೈವೇದ್ಯ, ಮಂಗಳಾರತಿ, ಹತ್ತು ಸಮಸ್ತರ ಪ್ರಾರ್ಥನೆ ಬಳಿಕ ಶ್ರೀ ದೇವರು ವನಕ್ಕೆ ಚಿತ್ರೈಸುವ ಕಾರ್ಯಕ್ರಮ ನಡೆದು, ಮಧ್ಯಾಹ್ನ ಧಾತ್ರಿಹವನ, ಶ್ರೀದೇವರಿಗೆ ಪಂಚಾಮೃತ ಅಭಿಷೇಕ, ಮಹಾ ನೈವೇದ್ಯ, ಪೂರ್ಣಾಹುತಿ, ಮಂಗಳಾರತಿ, ಪ್ರಸಾದ ವಿತರಣೆ, ರಾತ್ರಿ ಪಟ್ಟದ ದೇವರಿಗೆ ಪೂಜೆ, ವನದಲ್ಲಿ ದೀಪ ನಮಸ್ಕಾರ, ರಾತ್ರಿ ಪೂಜೆ, ಉತ್ಸವ ಆರಂಭಗೊಂಡಿತು., ಶ್ರೀ ದೇವರು ಸಣ್ಣ ಶಾಲೆಗೆ ಚಿತ್ತೈಸಿ ಪೂಜೆ , ಬಳಿಕ ಸಣ್ಣ ಗುರ್ಜಿಯಲ್ಲಿ ಪೂಜೆ , ಶ್ರೀ ಹನುಮಂತ ದೇವಸ್ಥಾನದಲ್ಲಿ ಪೂಜೆ, ದೊಡ್ಡ ಗುರ್ಜಿಯಲ್ಲಿ ಚಿತ್ತೈಸುವ ಪೂರ್ವಕವಾಗಿ ಶ್ರೀ ಗುರು ಗಣಪತಿ ಪೂಜೆ, ದ್ವಾರ ಪೂಜೆ, ಪಂಚ ಫಲದಾನ ಮುಹೂರ್ತ ನಿರೀಕ್ಷಣೆ ನಂತರ ಶ್ರೀ ದೇವರು ದೊಡ್ಡ ಗುರ್ಜಿಯಲ್ಲಿ ಚಿತ್ತೈಸುವುದು , ಶ್ರೀ ದೇವರಿಗೆ ಪ್ರಸನ್ನ ಪೂಜೆ, ಹತ್ತು ಸಮಸ್ತರಿಗೆ ಪ್ರಸಾದ, ಲಕ್ಷ ಆರತಿ ಸೇವೆ, ಶ್ರೀ ಮಹಮ್ಮಾಯ ದೇವಸ್ಥಾನದಲ್ಲಿ ಪೂಜೆ, ಶ್ರೀ ಕಾಶೀಮಠದಲ್ಲಿ ಪೂಜೆ ಬಳಿಕ ಶ್ರೀ ದೇವರು ಸಿಂಹಾಸನಕ್ಕೆ ಚಿತ್ರೈಸುವ ಪ್ರಕ್ರಿಯೆಗಳು ನಡೆಯಿತು.ಭಾನುವಾರ ಮರುದೀಪೋತ್ಸವ ಕಾರ್ಯಕ್ರಮಗಳು ನಡೆಯಿತು.
(more…)