ಮಂಗಳೂರು: ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆಯನ್ನು ನಡೆಸಲಾಯಿತು. ಈ ಸಂದರ್ಭ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಸಂಚಾಲಕಿ ಉಮಾ ಎನ್. ಸೋಮಯಾಜಿ, ರಾಜ್ಯ ಮಹಿಳಾ ಸಹಸಂಚಾಲಕಿ ಚೇತನ ದತ್ತಾತ್ರೇಯ ನೇತೃತ್ವ ವಹಿಸಿದ್ದರು. ಶಾರದ ವಿದ್ಯಾಲಯದ ಅಧ್ಯಕ್ಷ ಡಾ. ಎಂ. ಬಿ. ಪುರಾಣಿಕ್, ಮಂಗಳೂರಿನ ಹೋಟೆಲ್ ಉದ್ಯಮಿ ಪಿ.ಸೂರ್ಯನಾರಾಯಣ ರಾವ್, ರಾಜ್ಯ ಸಂಘಟನಾ ಕಾರ್ಯದರ್ಶಿ ಪೊಳಲಿ ಗಿರಿಪ್ರಕಾಶ್ ತಂತ್ರಿ, ಮುಂತಾದವರು ದೀಪ ಹಚ್ಚುವ ಮೂಲಕ ಉದ್ಘಾಟಿಸಿದರು. ಪೂರ್ಣಿಮಾ ಪ್ರಭಾಕರ್ ಪೇಜಾವರ ಕಾರ್ಯಕ್ರಮವನ್ನು ನಿರ್ವಹಿಸಿದರು