ಪುತ್ತೂರಿನ ಸಾಫ್ಟ್ ವೇರ್ ಕಂಪನಿ ದಿ ವೆಬ್ ಪೀಪಲ್ ತಮ್ಮ ಹೊಸ ಡಿಜಿಟಲ್ ಮಾರ್ಕೆಟಿಂಗ್ ವಿಭಾಗ “ಸ್ಕೇಲ್ (Scaaale)”ನ ಆರಂಭವನ್ನು 2023ರ ನವೆಂಬರ್ 30 ರಂದು ಕ್ಕೆ ವಿಧ್ಯುಕ್ತವಾಗಿ ಆರಂಭಿಸುತ್ತದೆ.
ಸ್ಕೇಲ್ ಆರಂಭದ ಸಮಾರಂಭವು ಜಿ ಎಲ್ ಟ್ರೇಡ್ ಸೆಂಟರ್ನ ಮೂರನೇ ಮಹಡಿಯಲ್ಲಿ ಬೆಳಿಗ್ಗೆ 9:30 ಕ್ಕೆ ನಡೆಯಲಿದ್ದು, ಪುತ್ತೂರು ಶಾಸಕ ಅಶೋಕ ಕುಮಾರ್ ರೈ, ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಜಿ.ಎಲ್.ಸಮೂಹ ಸಂಸ್ಥೆಗಳ ಚೇರ್ಮನ್ ಬಲರಾಮ ಆಚಾರ್ಯ ಸಹಿತ ಪ್ರಮುಖರು ಭಾಗವಹಿಸುವರು. ದಿ ವೆಬ್ ಪೀಪಲ್ ಸಿಇಒ ಆದಿತ್ಯ ಕಲ್ಲೂರಾಯ ಮತ್ತು ಸಿಒಒ ಶರತ್ ಶ್ರೀನಿವಾಸ ಪ್ರಕಾರ “ಸ್ಕೇಲ್ ಎಂಬುದು ನಮ್ಮ ಸಂಸ್ಥೆಯ ಡಿಜಿಟಲ್ ಮಾರ್ಕೆಟಿಂಗ್ ಸೇವೆಗಳಲ್ಲಿನ ವ್ಯಾಪಕತೆ ಮತ್ತು ಸೃಜನಾತ್ಮಕತೆಯ ಹೊಸ ಅಧ್ಯಾಯವಾಗಿದೆ. ಸ್ಕೇಲ್ ಮೂಲಕ ನಾವು ನಮ್ಮ ಗ್ರಾಹಕರಿಗೆ ಇನ್ನಷ್ಟು ಕೇಂದ್ರೀಕೃತ ಮತ್ತು ಪರಿಣಾಮಕಾರಿ ಡಿಜಿಟಲ್ ಮಾರ್ಕೆಟಿಂಗ್ ಸೇವೆಗಳನ್ನು ನೀಡಲು ಸಜ್ಜಾಗಿದ್ದೇವೆಸ್ಕೇಲ್ ನ ಆರಂಭವು ನಮ್ಮ ಕ್ಲೈಂಟ್ಗಳಿಗೆ ಇನ್ನಷ್ಟು ಉತ್ತಮ ಮತ್ತು ನವೀನ ಡಿಜಿಟಲ್ ಮಾರ್ಕೆಟಿಂಗ್ ಪರಿಹಾರಗಳನ್ನು ನೀಡುವಲ್ಲಿ ಒಂದು ಪ್ರಮುಖ ಹೆಜ್ಜೆ. ನಾವು ಗ್ರಾಹಕರ ಅಗತ್ಯಗಳನ್ನು ಆಳವಾಗಿ ಅರ್ಥೈಸಿ, ಅವರ ವ್ಯಾಪಾರವನ್ನು ಹೊಸ ಮಟ್ಟಕ್ಕೆ ತಲುಪಿಸಲು ಸ್ಕೇಲ್ ನ ಸೇವೆಗಳು ಸಹಾಯ ಮಾಡಲಿವೆ.”