ಮಂಗಳೂರಿನ ಶ್ರೀ ಯೋಗನಿಧಿ ಪತಂಜಲಿ ಪ್ರತಿಷ್ಠಾನ (ರಿ.) ವತಿಯಿಂದ “ಗೀತಾ ಜಯಂತಿ” ಪ್ರಯುಕ್ತ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಈ ಸ್ಪರ್ಧೆಗಳನ್ನು ಆನ್ಲೈನ್ ಮೂಲಕ ಏರ್ಪಡಿಸಲಾಗಿದೆ.
. ಗೀತಾ ಪಠಣ ಸ್ಪರ್ಧೆ: 5 ರಿಂದ 7ನೇ ತರಗತಿ- ಭಕ್ತಿ ಯೋಗ(12ನೇ ಅಧ್ಯಾಯ)ದ ಆರಂಭಿಕ 10 ಶ್ಲೋಕಗಳು. 8 ರಿಂದ 10ನೇ ತರಗತಿ – ಜ್ಞಾನ ವಿಜ್ಞಾನ ಯೋಗ (7ನೇ ಅಧ್ಯಾಯ)ದ ಆರಂಭಿಕ 10 ಶ್ಲೋಕಗಳು.ಪದವಿಪೂರ್ವವಿಭಾಗ- ವಿಭೂತಿ ಯೋಗ ( 10ನೇ ಅಧ್ಯಾಯ)ದ ಆರಂಭಿಕ 15 ಶ್ಲೋಕಗಳು., ಪದವಿ ವಿಭಾಗ- ಮೋಕ್ಷ ಸನ್ಯಾಸ ಯೋಗ (18ನೇ ಅಧ್ಯಾಯ )ದ ಆರಂಭಿಕ 15 ಶ್ಲೋಕಗಳು., ಸ್ನಾತಕೋತ್ತರ ವಿಭಾಗ- ವಿಶ್ವರೂಪ ದರ್ಶನ ಯೋಗ (11ನೇ ಅಧ್ಯಾಯ )ದ ಆರಂಭಿಕ 20 ಶ್ಲೋಕಗಳು., ಸಾರ್ವಜನಿಕ ವಿಭಾಗ- ಕರ್ಮಯೋಗ, (ಮೂರನೇ ಅಧ್ಯಾಯ)ದ ಆರಂಭಿಕ 10 ಶ್ಲೋಕಗಳು., ಭಾಗವಹಿಸುವವರು ಮೂರು ನಿಮಿಷದ ಪಠಣದ ವಿಡಿಯೋ ಮಾಡಿ 9632430012 ಈ ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಮೂಲಕ ಕಳುಹಿಸುವಂತೆ ಸೂಚಿಸಿದೆ. ನಿಮ್ಮ ಹೆಸರು. ವಿಳಾಸವನ್ನು ತಿಳಿಸಬೇಕು., ವಿದ್ಯಾರ್ಥಿಗಳು ನಿಮ್ಮ ತರಗತಿ ಹಾಗೂ ಶಾಲಾ/ಕಾಲೇಜಿನ ವಿಳಾಸ ತಿಳಿಸಬೇಕು., ಕೊನೆಯ ದಿನಾಂಕ ಡಿಸೆಂಬರ್ 21, 2023.
ಕನ್ನಡ ಭಾಷಣ ಸ್ಪರ್ಧೆ: 5 ರಿಂದ 7ನೇ ತರಗತಿ- ಶ್ರೀಕೃಷ್ಣ – ಸುಧಾಮರ ಸ್ನೇಹ ವರ್ಣಿಸಿ. , 8ರಿಂದ 10ನೇ ತರಗತಿ- ಕಾಳಿಂಗ ಮರ್ದನ ಕೃಷ್ಣ , ಪದವಿಪೂರ್ವ ಹಂತ- ಭಕ್ತಿಯೋಗದ ವೈಶಿಷ್ಟ್ಯ., ಪದವಿ ವಿಭಾಗ “ಕರ್ಮಣ್ಯೇವಾಧಿಕಾಸ್ತೇ…..” ಶ್ಲೋಕವನ್ನು ವಿಷದೀಕರಿಸಿ. , ಸ್ನಾತಕೋತ್ತರ ವಿಭಾಗ- ಭಗವದ್ಗೀತೆಯಲ್ಲಿ ತ್ರಿಗುಣಗಳ ವರ್ಣನೆ., ಸಾರ್ವಜನಿಕ ವಿಭಾಗ- ಭಗವದ್ಗೀತೆ ಮನುಕುಲಕ್ಕೆ ವರದಾನ.
ಭಾಷಣದ ಅವಧಿ ಮೂರು ನಿಮಿಷ. , ಭಾಷಣವನ್ನು ವಿಡಿಯೋ ಮಾಡಿ ಹೆಸರು, ವಿಳಾಸ ಸಹಿತ, 9632430012 ಈ ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಮೂಲಕ ಕಳುಹಿಸಬೇಕು., ನಿಮ್ಮ ಹೆಸರು. ವಿಳಾಸವನ್ನು ತಿಳಿಸಬೇಕು., ವಿದ್ಯಾರ್ಥಿಗಳು ನಿಮ್ಮ ತರಗತಿ ಹಾಗೂ ಶಾಲಾ/ಕಾಲೇಜಿನ ವಿಳಾಸ ತಿಳಿಸಬೇಕು. ಕೊನೆಯ ದಿನಾಂಕ 2023ರ ಡಿಸೆಂಬರ್ 21.
ಪ್ರಬಂಧ ಸ್ಪರ್ಧೆ: 5ರಿಂದ 7ನೇ ತರಗತಿ: ಶ್ರೀಕೃಷ್ಣ ಜನ್ಮವೃತ್ತಾಂತ, 8ರಿಂದ 10ನೇ ತರಗತಿ: ಶ್ರೀಕೃಷ್ಣನ ಬಾಲ್ಯ ಕಥನ, ಪದವಿಪೂರ್ವ ವಿಭಾಗ:, ಭಗವದ್ಗೀತಾ ಸಾರ., ಪದವಿ ವಿಭಾಗ:ಸಾಂಖ್ಯಯೋಗ. ವಿಶ್ಲೇಷಿಸಿ.ಸ್ನಾತಕೋತ್ತರ ವಿಭಾಗ: ಪುರುಷೋತ್ತಮ ಯೋಗ- ಸಾರಾಂಶ. ಸಾರ್ವಜನಿಕ ವಿಭಾಗ: ವಿಷಯ: ಇಂದಿನ ಜೀವನದಲ್ಲಿ ಭಗವದ್ಗೀತೆಯ ಪ್ರಾಶಸ್ತ್ಯ. ಪ್ರಬಂಧಗಳನ್ನು ಎ4 ಅಳತೆಯ ಪೇಪರಲ್ಲಿ ಮೂರು ಪುಟ ಮೀರದಂತೆ ಬರೆದು ಅಂಚೆ ಮೂಲಕ ಕಳುಹಿಸಬೇಕು. ನಿಮ್ಮ ಹೆಸರು. ವಿಳಾಸ , ಮೊಬೈಲ್ ಸಂಖ್ಯೆಯನ್ನು ಪ್ರತ್ಯೇಕ ಕಾಗದದಲ್ಲಿ ಬರೆದು ಜತೆಯಲ್ಲಿರಿಸಿ ಕಳುಹಿಸಬೇಕು. ವಿದ್ಯಾರ್ಥಿಗಳು ನಿಮ್ಮ ಹೆಸರು, ತರಗತಿ, ಶಾಲೆ/ ಕಾಲೇಜಿನ ವಿಳಾಸ ಪ್ರತ್ಯೇಕವಾಗಿ ಬರೆದು ತಿಳಿಸಿರಬೇಕು. ಪ್ರಬಂಧ ಹಾಗೂ ಇತರ ವಿವರಗಳನ್ನು ದಿನಾಂಕ ಡಿಸೆಂಬರ್ 21ರ ಒಳಗೆ ತಲುಪುವಂತೆ ಡಾ.ಸುಬ್ರಹ್ಮಣ್ಯ ಭಟ್, ವಿಜಯಶ್ರೀ ಚಿಕಿತ್ಸಾಲಯ. ಅಂಚೆ ಕಚೇರಿ ಎದುರು, ಮೊಗರ್ನಾಡು. ನರಿಕೊಂಬು ಅಂಚೆ, ಬಂಟ್ವಾಳ ತಾಲೂಕು. ದ.ಕ.ಜಿಲ್ಲೆ. 574231. ಈ ವಿಳಾಸಕ್ಕೆ ಕಳುಹಿಸಬೇಕು.