ಬಂಟ್ವಾಳ ರೋಟರಿ ಕ್ಲಬ್ ಸಹಕಾರದೊಂದಿಗೆ, ಮಂಗಳೂರಿನ ಎನಿಮಲ್ ಕೇರ್ ಟ್ರಸ್ಟ್ ಸಂಸ್ಥೆ ಡಿಸೆಂಬರ್ 3ರಂದು ಬಿ ಸಿ ರೋಡ್ ನ ಖಾಸಗಿ ಬಸ್ಟ್ ಸ್ಟಾಂಡ್ ಎದುರಿಗೆ, ಫ್ಲೈಓವರ್ ಕೆಳಗೆ ಸಂಪೂರ್ಣವಾಗಿ ಲಸಿಕೆಗಳನ್ನು ಕೊಟ್ಟ ಭಾರತೀಯ ತಳಿಯ ನಾಯಿ ಬೆಕ್ಕುಮರಿಗಳನ್ನು ಉಚಿತವಾಗಿ ದತ್ತು ಕೊಡುತ್ತಿದ್ದಾರೆ. ಮರಿಗಳನ್ನು ದತ್ತು ಪಡೆಯಲು ಅದಾರ ಪತ್ರ ಕಡ್ಡಾಯ. ಬೆಳಿಗ್ಗೆ ಹತ್ತರಿಂದ ಸಂಜೆ ಐದು ಗಂಟೆಯವರೆಗೆ ಈ ಶಿಭಿರವನ್ನು ನಡೆಸಲಾಗುತ್ತಿದೆ. ಹಣ ಕೊಟ್ಟು ಪ್ರಾಣಿಗಳನ್ನು ಪಡೆಯುವ ಬದಲು ನಮ್ಮ ರಕ್ಷಿಸಿದ ದೇಸೀಯ ಪ್ರಾಣಿಗಳಿಗೆ ಬದುಕನ್ನು ಕೊಡಬಹುದು ಎಂದು ಎನಿಮಲ್ ಕೇರ್ ಟ್ರಸ್ಟ್ ಸಂಸ್ಥೆ ಹಾಗೂ ರೋಟರಿ ಕ್ಲಬ್ ಬಂಟ್ವಾಳದ ಪ್ರಕಟಣೆ ತಿಳಿಸಿದೆ.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…