ವೀರಕಂಬ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜನಾರ್ದನ ಪೂಜಾರಿ ಅವರು, ತನ್ನ ಉಳಿತಾಯದ ಹಣದಿಂದ ವೀರಕಂಬ ಮಜಿ ಶಾಲೆಯ ಸ್ಕೌಟ್ ಮಕ್ಕಳಿಗೆ ಉಚಿತ ಸಮವಸ್ತ್ರವನ್ನು ಕೊಡುಗೆಯಾಗಿ ನೀಡಿದರು.
ಕೇವಲ ಪಠ್ಯಕ್ಕೆ ಸಂಬಂಧಿಸಿ ಕಲಿಕೆ ಮಾಡುವ ಜೊತೆಗೆ ಪಠ್ಯೇತರವಾಗಿ ಸ್ಕೌಟ್ಸ್ ಮೊದಲಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಜೀವನ ಕೌಶಲಗಳ ಬಗ್ಗೆ ಅನುಭವವನ್ನು ಪಡೆಯಬಹುದು ಎಂದು ಈ ಸಂದರ್ಭ ಹೇಳಿದರು.ಶಾಲಾ ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸಾ,ಶಾಲಾ ಸ್ಕೌಟ್ ಕ್ಯಾಪ್ಟನ್ ಶಿಕ್ಷಕಿ ಸಂಗೀತ ಶರ್ಮ ಪಿ ಜಿ, ಉಪಸ್ಥಿತರಿದ್ದರು.
(more…)