ಶನಿವಾರ ರಾತ್ರಿ ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪ ಮೊಗರನಾಡು ಸಾವಿರ ಸೀಮೆಯ ಶ್ರೀ ನಿಟಿಲಾಕ್ಷ ಸದಾಶಿವ ದೇವರ ಸನ್ನಿಧಿಯಲ್ಲಿ ವರ್ಷಾವಧಿ ನಡೆಯುವ ಲಕ್ಷದೀಪೋತ್ಸವ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಪೂರ್ವಾಹ್ನ ಶುದ್ಧ ಕಲಶ, ಮಧ್ಯಾಹ್ನ ಮಹಾಪೂಜೆ, ಸಂಜೆ ದೀಪಾರಾಧನೆ, ರಾತ್ರಿ ಬಲಿ ಉತ್ಸವ ನೆರವೇರಿದವು. ಇದಲ್ಲದೆ, ಶ್ರೀದೇವರ ಸವಾರಿ ಪಡ್ಡಾಯಿಬೈಲು ನಿಂದ ಆರಂಭಗೊಂಡು, ವಿವಿಧೆಡೆ ಸಾಗಿ ರಾತ್ರಿ ಶ್ರೀ ಕ್ಷೇತ್ರದಲ್ಲಿ ಬಲಿ ಉತ್ಸವ ನೆರವೇರಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸದಸ್ಯರಲ್ಲದೆ, ಕ್ಷೇತ್ರದ ಭಕ್ತವೃಂದ ಈ ಸಂದರ್ಭ ಉಪಸ್ಥಿತರಿದ್ದರು.
27ರಂದು ಕಾರ್ತಿಕ ಅಖಂಡ ಭಜನೋತ್ಸವ, ಶತರುದ್ರಾಭಿಷೇಕ: ಸೋಮವಾರ ನ.27ರಂದು ನೆಟ್ಲ ಶ್ರೀ ನಿಟಿಲಾಕ್ಷ ಸದಾಶಿವ ದೇವರಿಗೆ ಶತರುದ್ರಾಭಿಷೇಕ ನಡೆಯಲಿದೆ. ಸೂರ್ಯೋದಯದಿಂದ 28ರ ಮಂಗಳವಾರ ಸೂರ್ಯೋದಯದವರೆಗೆ ಕಾರ್ತಿಕ ಅಖಂಡ ಭಜನೋತ್ಸವ ನಡೆಯುವುದು. ಸುಮಾರು 22 ಭಜನಾ ತಂಡಗಳು ಭಾಗವಹಿಸಲಿವೆ.