ಬಂಟ್ವಾಳ

ಕಸಾಪ, ಅಭಿರುಚಿ ವತಿಯಿಂದ ಕಿನ್ನರ ಮೇಳದ ನಾಟಕ ‘ಅನ್ಯಾಳ ಡೈರಿ’ ಪ್ರದರ್ಶನ

ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಅಭಿರುಚಿ ಜೋಡುಮಾರ್ಗ ಸಹಯೋಗದಲ್ಲಿ ತುಮರಿಯ ಕಿನ್ನರ ಮೇಳ ಪ್ರಸ್ತುತಪಡಿಸಿದ ಅನ್ಯಾಳ ಡೈರಿ ಎಂಬ ನಾಟಕವನ್ನು ಬಿ.ಸಿ.ರೋಡಿನ ಕೈಕುಂಜೆಯಲ್ಲಿರುವ ಕನ್ನಡ ಭವನದ ಬಯಲು ರಂಗಮಂಟಪದಲ್ಲಿ ಶನಿವಾರ ರಾತ್ರಿ ಪ್ರದರ್ಶಿಸಲಾಯಿತು.

ಆನ್ ಫ್ರಾಂಕ್ ಅವರ ಡೈರಿ ಆಫ್ ಎ ಯಂಗ್ ಗರ್ಲ್ ಕೃತಿ ಆಧರಿತ ಅನ್ಯಾಳ ಡೈರಿ ನಾಟಕರೂಪಾಂತರವನ್ನು ಎಚ್.ಕೆ. ರಾಮಚಂದ್ರಮೂರ್ತಿ ಮಾಡಿದ್ದಾರೆ. ವಿನ್ಯಾಸ ಮತ್ತು ನಿರ್ದೇಶನವನ್ನು ಸಾಲಿಯಾನ ಉಮೇಶ ನಾರಾಯಣ ನಿರ್ವಹಿಸಿದರು. ಈ ಸಂದರ್ಭ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ಗೌರವ ಪ್ರಧಾನ ಕಾರ್ಯದರ್ಶಿ ವಿ.ಸು.ಭಟ್, ಜಿಲ್ಲಾ ಸಮಿತಿ ಸದಸ್ಯ ಪೂವಪ್ಪ ನೇರಳಕಟ್ಟೆ, ಅಭಿರುಚಿ ಜೋಡುಮಾರ್ಗದ ಮುಖ್ಯಸ್ಥರಾದ ರಂಗಕರ್ಮಿ ಮಹಾಬಲೇಶ್ವರ ಹೆಬ್ಬಾರ ಸಹಿತ ಕಸಾಪ ಮತ್ತು ಅಭಿರುಚಿ ತಂಡದ ಸದಸ್ಯರು, ಸಾರ್ವಜನಿಕರು ಹಾಜರಿದ್ದು, ನಾಟಕವನ್ನು ವೀಕ್ಷಿಸಿದರು.

The play Anyala Diary presented by Tumari Kinnara Mela in collaboration with Bantwala Taluk Kannada Sahitya Parishad, Abhiruchi Jodumarga was staged on Saturday night at Kannada Bhavan’s open air theater at Kaikunje, BC Road.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ