ಬಂಟ್ವಾಳದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಬೆಳಗಿನ ಜಾವ ಶ್ರೀವಿಶ್ವರೂಪದರ್ಶನ ನಡೆಯಿತು. ಕಾರ್ತಿಕ ಶುದ್ಧ ಷಷ್ಠಿ ಉಪರಿ ಸಪ್ತಮಿಯಾದ ಭಾನುವಾರ ಪ್ರಾತಃಕಾಲ 4 ಗಂಟೆಗೆ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ತಿರುಮಲ ವೆಂಕಟರಮಣ ದೇವರ ದಿವ್ಯ ಸನ್ನಿಧಿಯಲ್ಲಿ ಲೋಕ ಕಲ್ಯಾಣಕ್ಕಾಗಿ 22ನೇ ವರ್ಷದ ವಿಶ್ವರೂಪದರ್ಶನ ಸೇವೆಯನ್ನು ದಿವ್ಯ ಜ್ಯೋತಿ ಬೆಳಗಿಸಿ ಸಮಸ್ತ ಭಜಕ ವೃಂದದವರ ಸಹಕಾರದೊಂದಿಗೆ ನಡೆಸಲಾಯಿತು. ಪ್ರಾತಕಾಲ 5 ಗಂಟೆಗೆ ಕಾಕಡಾರತಿ, ಜಾಗರ ಪೂಜೆ ನಂತರ ವಿಶೇಷಾಲಂಕಾರ ಶ್ರೀ ದೇವರ ವಿಶೇಷ ವಿಶ್ವರೂಪದರ್ಶನ ಭಾಗ್ಯ, ಪ್ರಸಾದ ವಿತರಣೆ ನಡೆದವು.ದೀಪಾಲಂಕಾರದಲ್ಲಿ ಶಂಖ, ಚಕ್ರ, ಗದಾ, ಪದ್ಮಾಲಂಕಾರಗಳು, ಹನುಮಂತನ ಅಲಂಕಾರ ಸಹಿತ ಬಂಟ್ವಾಳ ದೇವಸ್ಥಾನದ ಸುತ್ತಲೂ ಬೆಳಕಿನ ವೈಭವ ಕಂಡುಬಂದವು. ವಿಶೇಷವಾಗಿ ಹೂಗಳಿಂದ ತ್ರಿವರ್ಣ ರಚಿಸಿ, ಕಪ್ ರೀತಿಯಲ್ಲಿ ಚಿತ್ರಿಸಿ, ಸುತ್ತಲೂ ದೀಪವಿಟ್ಟು, ಅದರ ಪಕ್ಕ ಆಲ್ ದಿ ಬೆಸ್ಟ್ ಇಂಡಿಯಾ ಎಂಬ ಹೂಗಳ ಅಲಂಕಾರ ಮಾಡಿ, ಸುತ್ತಲೂ ದೀಪಾಲಂಕಾರ ಮಾಡಿರುವುದು ಗಮನ ಸೆಳೆಯಿತು. ಕ್ರಿಕೆಟ್ ಫೈನಲ್ ಪಂದ್ಯಾಟ ಭಾನುವಾರ ಸಂಜೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಈ ಅಲಂಕಾರವನ್ನು ಮಾಡಲಾಗಿತ್ತು.ಶಿಲೆ ಶಿಲೆ ಹಕ್ಕಿನ ಮೊಕ್ತೇಸರರಾಧ ಬಿ. ಸೂರ್ಯನಾರಾಯಣ ಬಾಳಿಗಾ, ಆಡಳಿತ ಮೊಕ್ತೇಸರರಾಧ ಬಿ. ಅಶೋಕ್ ಶೆಣೈ, ಮೊಕ್ತೇಸರರಾಧ ಭಾಮಿ ನಾಗೇಂದ್ರನಾಥ ಶೆಣೈ, ಬಿ. ಸುರೇಶ್.ವಿ.ಬಾಳಿಗಾ ಉಪಸ್ಥಿತರಿದ್ದರು ಫೊಟೋಗಳು ಇಲ್ಲಿವೆ ಚಿತ್ರಗಳು: Venkatramana Pai K
\