ಕಲ್ಲಡ್ಕದ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಪದವಿಯ ಸಾಧನ ಭವನದಲ್ಲಿ ವ್ಯಸನಮುಕ್ತ ಸಮಾಜ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಬಂಟ್ವಾಳ ಗ್ರಾಮಾಂತರ ಆರಕ್ಷಕ ಠಾಣೆಯ ಉಪ ನಿರೀಕ್ಷಕರಾಗಿರುವ ಮೂರ್ತಿ ಈ ಸಂದರ್ಭ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿ ಮತ್ತು ಹದಿಹರೆಯದ ವಯಸ್ಸಿನ ಮಕ್ಕಳಲ್ಲಿ ಕಂಡುಬರುವ ಕೆಲವೊಂದು ಅಪರಾಧೀಯ ಕೃತ್ಯಗಳು ಮತ್ತು ಡ್ರಗ್ಸ್ ,ಗಾಂಜಾ, ಬೀಡಿ ,ಸಿಗರೇಟು ಮುಂತಾದ ವ್ಯಸನಗಳಿಗೆ ಒಳಗಾಗುವ ಮತ್ತು ಅದರ ಪರಿಣಾಮವನ್ನು ತಿಳಿಸಿದರು. ಸಂಚಾರಿ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಬಳಸಬೇಕಾದ ನಿಯಮಗಳು ಮತ್ತು ಜಾಗರೂಕತೆಗಳನ್ನು ವಿವರಿಸಿದರು. ಸಾಮಾಜಿಕ ಜಾಲತಾಣಗಳು ಇಂದು ಯುವಕರನ್ನ ತಪ್ಪು ದಾರಿಗೆ ಕರೆದೊಯ್ಯುವುದರ ಬಗೆಗೆ ಜಾಗೃತಿಯನ್ನ ಮೂಡಿಸಿದರು.
ಅಧ್ಯಕ್ಷತೆಯನ್ನು ಪದವಿ ವಿಭಾಗದ ಪ್ರಾಚಾರ್ಯ ಕೃಷ್ಣಪ್ರಸಾದ್ ಕಾಯರ್ ಕಟ್ಟೆ ವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಯತಿರಾಜ್ ಪಿ ಮತ್ತು ಸಹಯೋಜನಾಧಿಕಾರಿ ದೀಕ್ಷಿತಾ ಉಪಸ್ಥಿತರಿದ್ದರು. ಸ್ವಯಂಸೇವಕಿಯಾದ ಆಶ್ರಿತ ಸ್ವಾಗತಿಸಿ ದ್ವಿತೀಯ ವಾಣಿಜ್ಯ ವಿಭಾಗದ ಜಿತೇಶ್ ವಂದಿಸಿದರು ,ದ್ವಿತೀಯ ಕಲಾ ವಿಭಾಗದ ಪದ್ಮಶ್ರೀ ಪ್ರಾರ್ಥನ ಗೀತೆಯನ್ನು ಹಾಡಿದರು. ವಿಸ್ಮಿತ, ಕಾರ್ಯಕ್ರಮ ನಿರೂಪಿಸಿದರು.