ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶೈಕ್ಷಣಿಕ ಮತ್ತು ವೃತ್ತಿಪರ ಕ್ಷೇತ್ರದ ಸಾಧಕ ಶಿಕ್ಷಕರಿಗೆ ನೀಡಲು ಉದ್ದೇಶಿಸಿರುವ ಸಮನ್ವಯ ಶಿಕ್ಷಕ ಪ್ರಶಸ್ತಿಯನ್ನು ಈ ಬಾರಿ ಯೆನಪೋಯಾ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಸಹಪ್ರಾಧ್ಯಾಪಕ ಡಾ. ನಿಯಾಝ್ ಪಣಕಜೆ ಅವರಿಗೆ ಪ್ರದಾನ ಮಾಡಲಾಯಿತು.
ಮೆಲ್ಕಾರ್ ಸಮೀಪ ಮಾರ್ನಬೈಲು ಎಂಬಲ್ಲಿ ಮೆಲ್ಕಾರ್ ಮಹಿಳಾ ಕಾಲೇಜಿನಲ್ಲಿ ಸಮನ್ವಯ ಶಿಕ್ಷಕರ ಸಂಘದ ವತಿಯಿಂದ ನಡೆದ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯಲ್ಲಿ ಮೀಫ್ ಜಿಲ್ಲಾಧ್ಯಕ್ಷ ಮೂಸಬ್ಬ ಪಿ.ಬ್ಯಾರಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ನಿಯಾಝ್ ಪಣಕಜೆ, ಅತ್ಯಂತ ಕಡು ಬಡತನದಲ್ಲಿ ಹುಟ್ಟಿ, ಬೆಳೆದು, ದುಡಿಯುತ್ತಲೇ ಕಲಿತು ಉನ್ನತ ಶಿಕ್ಷಣ ಪಡೆದಿರುವ ನನ್ನಂತಹ ಓರ್ವ ಯುವ ಶಿಕ್ಷಕನನ್ನು ಸಮನ್ವಯ ಶಿಕ್ಷಕ ಚೊಚ್ಚಲ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಅಭಿಮಾನದ ಸಂಗತಿಯಾಗಿದ್ದು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೂಸಬ್ಬ ಬ್ಯಾರಿ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳ ಸಾಧಕ ಬೋಧಕ ವರ್ಗವನ್ನು ಉತ್ತಮ ಶಿಕ್ಷಕ ಪ್ರಶಸ್ತಿಗೆ ಪರಿಗಣಿಸಬೇಕೆಂದು ಸರಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.
ಮದನಿ ಪದವಿಪೂರ್ವ ಕಾಲೇಜು ನಿವೃತ್ತ ಪ್ರಿನ್ಸಿಪಾಲ್ ಇಸ್ಮಾಯಿಲ್ ಟಿ, ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಝುಬೈರ್ ವಿಟ್ಲ, ನಿವೃತ್ತ ಶಿಕ್ಷಕರಾದ ಅಬ್ದುಲ್ ಖಾದರ್ ಬಂಟ್ವಾಳ, ಇಬ್ರಾಹಿಂ ಒಡಿಯೂರು ಅವರನ್ನು ರಾಷ್ಟ್ರೀಯ ಶಿಕ್ಷಣ ದಿನಾಚರಣೆಯ ಅಂಗವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಿಕ್ಷಕರಿಗೆ ರಸಪ್ರಶ್ನೆ ಹಾಗೂ ಸೂಪರ್ ಮಿನಿಟ್ ಸ್ಪರ್ಧಾ ಕಾರ್ಯಕ್ರಮಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ದುಲ್ ಮಜೀದ್ ಎಸ್ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯದರ್ಶಿ ಹಾರೀಸ್ ಬಾಂಬಿಲ ,ಕೋಶಾಧಿಕಾರಿ ಮೊಹಮ್ಮದ್ ತೌಸೀಫ್ ಪಾಂಡವರಕಲ್ಲು , ಮೆಲ್ಕಾರ್ ಮಹಿಳಾ ಕಾಲೇಜಿನ ಪ್ರಿನ್ಸಿಪಾಲ್
ಅಬ್ದುಲ್ ಲತೀಫ್ ಬಿ.ಕೆ. ಉಪಸ್ಥಿತರಿದ್ದರು. ಹಿರಿಯ ಶಿಕ್ಷಕರಾದ ಅಬ್ದುಲ್ ರಝಾಕ್ ಅನಂತಾಡಿ, ಯೂಸುಫ್ ವಿಟ್ಲ, ಸಮೀಯುಲ್ಲಾ ವಗ್ಗ, ಬಿ.ಮೊಹಮ್ಮದ್ ತುಂಬೆ, ಅಕ್ಬರ್ ಅಲಿ, ಹಮೀದ್ ಮಾಸ್ಟರ್ ಮಾಣಿ, ಮೊಹಮ್ಮದ್ ಮುಸ್ಥಾಫ ಬೋಳಂತೂರು, ತಾಹಿರಾ ತುಂಬೆ, ಇರ್ಷಾದ್ ಮೆಲ್ಕಾರ್, ಅಸ್ಮ ಗಡಿಯಾರ್, ಸುರಯ್ಯ ನಾರ್ಶ, ಶಾಹಿದ್ ಮಂಗಳೂರು , ಸಂಶಾದ್ ಕಣ್ಣೂರು, ಆಯಿಶಾ ಮೆಲ್ಕಾರ್ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ಸಮನ್ವಯ ಶಿಕ್ಷಕರ ಸಂಘದ ಬಂಟ್ವಾಳ ಘಟಕಾಧ್ಯಕ್ಷ ಮೊಹಮ್ಮದ್ ಮನಾಝಿರ್ ಸಭಾ ಕಾರ್ಯಕ್ರಮ ನಿರೂಪಿಸಿದರು.