ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸಹಕಾರ ಸಪ್ತಾಹದ ಉದ್ಘಾಟನಾ ಸಮಾರಂಭ ಬಂಟ್ವಾಳ ತಾಲೂಕಿನ ಮಂಚಿ ವ್ಯವಸಾಯ ಸೇವಾ ಸಹಕಾರ ಸಂಘದ ವಠಾರದಲ್ಲಿ ನವೆಂಬರ್ 14ರಂದು ನಡೆಯಲಿದೆ ಎಂದು ದ.ಕ.ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಹೇಳಿದ್ದಾರೆ.
ಸಂಘದ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ದ.ಕ.ಜಿಲ್ಲಾ ಸಹಕಾರಿ ಯೂನಿಯನ್, ಮಂಚಿ ವ್ಯವಸಾಯ ಸೇವಾ ಸಹಕಾರ ಸಂಘ ಮತ್ತು ಬಂಟ್ವಾಳ ತಾಲೂಕಿನ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಸ್ಥಳೀಯ ಮಹಾದೇವ ವಿ.ಸ.ಸಂಘ, ಹಾಲು ಉತ್ಪಾದಕರ ಸಹಕಾರ ಸಂಘ, ಲಕ್ಷ್ಮೀನರಸಿಂಹ ವಿ.ಸ.ಸಂಘ ಮತ್ತು ಬಂಟ್ವಾಳ ತಾಳೆ ಕೆಲಸಗಾರರ ವಿ.ಸ.ಸಂಘಗಳು ಕಾರ್ಯಕ್ರಮಕ್ಕೆ ನೆರವು ನೀಡಲಿವೆ ಎಂದರು. ಜಿಲ್ಲಾ ಮಟ್ಟದ ಸಹಕಾರ ಸಪ್ತಾಹವನ್ನು ಸ್ಪೀಕರ್ ಯು.ಟಿ.ಖಾದರ್ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಶಾಸಕ ರಾಜೇಶ್ ನಾಯ್ಕ್ ವಹಿಸುವರು ಎಂದವರು ಮಾಹಿತಿ ನೀಡಿದರು. ಈ ಸಂದರ್ಭ ಸಾಧಕ ಪ್ರಗತಿಪರ ಕೃಷಿಕರು ಮತ್ತು ಹಿರಿಯ ಸಹಕಾರಿಗಳನ್ನು ಅಭಿನಂದಿಸಲಾಗುವುದು. ವಸ್ತುಪ್ರದರ್ಶನ, ಮಾಹಿತಿ ಕಾರ್ಯಕ್ರಮಗಳು ಇರಲಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಂಚಿ ವ್ಯ.ಸೇ.ಸಹಕಾರಿ ಸಂಘದ ಅಧ್ಯಕ್ಷ ಬಿ.ಉಮ್ಮರ್, ಉಪಾಧ್ಯಕ್ಷ ವಿಶ್ವನಾಥ ನಾಯ್ಕ್ ಎನ್, ಸಿಇಒ ನಾರಾಯಣ ಪಿ, ಮಂಚಿ ಗ್ರಾಪಂ ಅಧ್ಯಕ್ಷ ಇಬ್ರಾಹಿಂ ಜಿ.ಎಲ್, ಸಹಕಾರಿ ಯೂನಿಯನ್ ಸಿಇಒ ಎಸ್.ವಿ.ಹಿರೇಮಠ, ಸಹಕಾರಿ ಸಂಘಗಳ ವಲಯ ಮೇಲ್ವಿಚಾರಕ ಯೋಗೀಶ ಎಚ್, ಮಹಾದೇವ ವಿ.ಸ.ಸಂಘ ಅಧ್ಯಕ್ಷ ಮೋಹನ್, ಬಂಟ್ವಾಳ ತಾಳೆ ಕೆಲಸಗಾರರ ವಿ.ಸ.ಸಂಘ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಮಂಚಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮುರಳೀಧರ ಆಳ್ವ, ಮಂಚಿ ಲಕ್ಷ್ಮೀನರಸಿಂಹ ವಿ.ಸ.ಸಂಘ ಅಧ್ಯಕ್ಷ ಕೈಯೂರು ನಾರಾಯಣ ಭಟ್, ಮಂಚಿ ಸಂಘದ ನಿರ್ದೇಶಕರಾದ ಚಂದ್ರಹಾಸ ಕರ್ಕೇರ, ಅಬ್ದುಲ್ ರಹಿಮಾನ್, ಭಾಗೀರಥಿ, ಎಂ, ಮೋಹನದಾಸ ಶೆಟ್ಟಿ, ಕೇಶವ ರಾವ್ ಎನ್, ದಿವಾಕರ ನಾಯಕ್, ಸುಧಾಕರ ರೈ, ಫಿಲೋಮಿನಾ, ಸಂಧ್ಯಾಕುಮಾರಿ ಸ್ಥಳೀಯ ಸಂಘಗಳ ಪ್ರಮುಖರಾದ ಪುಷ್ಪರಾಜ ಕುಕ್ಕಾಜೆ ಸಹಿತ ಪ್ರಮುಖರು ಉಪಸ್ಥಿತರಿದ್ದರು.