VISIT BHADRA HOME APPLIANCES BASTIPADPU BANTWAL
VISIT BHADRA HOME APPLIANCES BASTIPADPU BANTWAL
ಬಂಟ್ವಾಳ ಬಸ್ತಿಪಡ್ಪುವಿನ ಭದ್ರಾ ಹೋಂ ಅಪ್ಲೈನ್ಸಸ್ ನ ತೃತೀಯ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಮಳಿಗೆಯಲ್ಲಿ ಶನಿವಾರ ಸಂಜೆ ಚಾಲನೆ ನೀಡಲಾಯಿತು.
ಸಂಸ್ಥೆಯ ಹಿತೈಷಿ ಸ್ವಪ್ನಾ ಹರೀಶ್ ಶೆಣೈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಸ್ಥೆಯ ಹಿರಿಯರಾದ ಆಶಾಲತಾಬಾಯಿ, ಭದ್ರಾ ಹೋಂ ಅಪ್ಲೈನ್ಸಸ್ ಮಾಲಕಿ ಮೇಘಾ ಆಚಾರ್ಯ, ಗ್ರಾಹಕರಾದ ಭವ್ಯ ಪವನ್ ರಾವ್, ಗಾಯತ್ರಿ ಭಟ್ ಈ ಸಂದರ್ಭ ಉಪಸ್ಥಿತರಿದ್ದರು.
ನವೆಂಬರ್ 4ರಿಂದ 15ರವರೆಗೆ ದೀಪಾವಳಿ ಮತ್ತು 3ನೇ ವಾರ್ಷಿಕೋತ್ಸವ ಪ್ರಯುಕ್ತ ಭರ್ಜರಿ ಆಫರ್ ಗಳನ್ನು ಒಳಗೊಂಡ ಈ ವರ್ಷದ ಅತಿ ದೊಡ್ಡ ಸೇಲ್ ಇದಾಗಿದೆ ಎಂದು ಕಾರ್ಯಕ್ರಮ ನಿರ್ವಹಿಸಿದ ಭದ್ರಾ ಸಮೂಹ ಸಂಸ್ಥೆಗಳ ಮಾಲೀಕರಾದ ಮಂಜುನಾಥ ಆಚಾರ್ಯ ಈ ಸಂದರ್ಭ ತಿಳಿಸಿದರು. ಭದ್ರಾ ಸಮೂಹ ಸಂಸ್ಥೆಗಳ ಮುಖ್ಯಸ್ಥರೂ ಹಿರಿಯರೂ ಆಗಿರುವ ವರದ ಆಚಾರ್ಯ, ಆಶಾಲತಾಬಾಯಿ ದಂಪತಿ ಈ ಸಂದರ್ಭ ಉಪಸ್ಥಿತರಿದ್ದು, ಶುಭ ಹಾರೈಸಿದರು. ಈ ಸಂದರ್ಭ ಮೊದಲ ಗ್ರಾಹಕರಿಗೆ ಆಕರ್ಷಕ ಉಡುಗೊರೆ ವಿತರಿಸಲಾಯಿತು. ವಿವಿಧ ಬ್ರಾಂಡ್ ಗಳ ಎಲೆಕ್ಟ್ರಾನಿಕ್ಸ್ ಹಾಗೂ ಫರ್ನೀಚರ್ ಉತ್ಪನ್ನಗಳ ವಿಶೇಷ ಪ್ರದರ್ಶನ ಮತ್ತು ಮಾರಾಟ, ಪ್ರತಿ ಖರೀದಿಗೂ ಖಚಿತ ಉಡುಗೊರೆ, ಕ್ಯಾಷ್ ಬ್ಯಾಕ್ ವೋಚರ್, ಫುಡ್ ಫೆಸ್ಟಿವಲ್, ಉಚಿತ ಸರ್ವೀಸ್ ಕ್ಯಾಂಪ್, ಇಎಂಐ ಮೇಳ ಹಾಗೂ ವಿಜಯ ಕರ್ನಾಟಕದ ದೀಪೋತ್ಸವ ಹಿನ್ನೆಲೆಯಲ್ಲಿ ಖರೀದಿಗೆ ಹಲವು ಆಕರ್ಷಕ ಬಹುಮಾನಗಳು ಇಲ್ಲಿವೆ ಎಂದು ಮಂಜುನಾಥ ಆಚಾರ್ಯ ತಿಳಿಸಿದ್ದಾರೆ.