ಸಂಗೀತವಾಹಿನಿಯ ಉಚಿತ ಸಂಗೀತ ತರಗತಿಯ ತೃತೀಯ ವಾರ್ಷಿಕೋತ್ಸವ ಅಕ್ಟೋಬರ್ 22ರಂದು ಸಂಜೆ 4 ಗಂಟೆಗೆ ಕಲ್ಲಡ್ಕದ ಉಮಾಶಿವ ಕ್ಷೇತ್ರದಲ್ಲಿ ನಡೆಯಿತು. ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.
ಸಾಫ್ಟ್ವೇರ್ ಇಂಜಿನಿಯರ್ ಡಾ. ಮಹೇಶ ಪದ್ಯಾಣ ಕಳೆದ ಮೂರು ವರ್ಷಗಳಿಂದ 50ಕ್ಕೂ ಹೆಚ್ಚು ಸಂಗೀತಾಸಕ್ತರಿಗೆ ಬಂಟ್ವಾಳ ತಾಲೂಕಿನ ಪದ್ಯಾಣದಲ್ಲಿ ಹಾಗೂ ಕಲ್ಲಡ್ಕದಲ್ಲಿ ಉಚಿತವಾಗಿ ಸಂಗೀತ ತರಗತಿಯನ್ನು ನಡೆಸುತ್ತಿದ್ದಾರೆ. ಅಕ್ಟೋಬರ್ 24ನೇ ತಾರೀಕು ವಿಜಯ ದಶಮಿಯ ದಿನದಂದು ಬೆಳಿಗ್ಗೆ 10 ಘಂಟೆಗೆ, ಮಂಗಳೂರಿನ Jail Road ನಲ್ಲಿ ಇರುವ ಶ್ರೀ ಸುಬ್ರಹ್ಮಣ್ಯ ಸಭಾ ದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಕೀಬೋರ್ಡ್ ತರಗತಿಗಳನ್ನು ಆರಂಭಿಸಲಾಗಿದೆ. ತರಗತಿಗಳು ಪ್ರತಿ ಗುರುವಾರ ಮಧ್ಯಾಹ್ನ 3 ಘಂಟೆಯ ನಂತರ ನಡೆಯುತ್ತವೆ. ಸಂಗೀತದ ಜೊತೆಗೆ ಭಜನೆ, ದೇಶಭಕ್ತಿ ಗೀತೆ ಹಾಗೂ ಭಕ್ತಿ ಗೀತೆಗಳನ್ನು ಕೂಡಾ ಕಲಿಸಲಾಗುವುದು. ಮಕ್ಕಳು ಒಳ್ಳೆಯ ಸಂಸ್ಕಾರವನ್ನು ಬೆಳೆಸಿಕೊಳ್ಳುವ ಬಗ್ಗೆ ಹೆಚ್ಚಿನ ಮಹತ್ವ ಕೊಡಲಾಗುವುದು. ಆಸಕ್ತರು, ಈ ಕೆಳಗಿನ ಫೋನ್ ನಂಬರ್ ಗೆ ಸಂಪರ್ಕಿಸಬೇಕಾಗಿ ವಿನಂತಿ. ಶಿಕ್ಷಕರು : Dr. ಮಹೇಶ ಪದ್ಯಾಣ ಮೊಬೈಲ್ ನಂಬರ್ : 9448093317 ಗುರುಗಳ ಬಗ್ಗೆ ಸಂಕ್ಷಿಪ್ತ ವಿವರಣೆ ಇಲ್ಲಿದೆ.
ತಮ್ಮ ಇಂಜಿನಿಯರಿಂಗ್ ಪದವಿಯನ್ನು ಗಳಿಸಿದ ನಂತರ Dr. ಮಹೇಶ ಪದ್ಯಾಣ ಇವರು (https://www.linkedin.com/in/dr-mahesha-padyana-phd-42633462)
ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಬೆಂಗಳೂರಿನಲ್ಲಿ ವಿದ್ವಾನ್ S ಶಂಕರ್ ಅವರಲ್ಲಿ ಪ್ರಾರಂಭಿಸಿ, ನಂತರ ವಿದ್ವಾನ್. ನೇತಿ ಶ್ರೀರಾಮ ಶರ್ಮ ಮತ್ತು ವಿದ್ವಾನ್ L ರಾಮಶೇಷ ರವರಲ್ಲಿ ಮುಂದುವರೆಸಿದರು. ಕರ್ನಾಟಕ ಸಂಗೀತದಲ್ಲಿ ಇರುವ ಸ್ವರಪ್ರಸ್ತಾರ ವನ್ನು ಕಂಪ್ಯೂಟರ್ ಸಾಫ್ಟ್ ವೇರ್ ಮೂಲಕ ರಚಿಸುವ ಬಗ್ಗೆ Ph.D ಯನ್ನು ಮಾಡಿ, ಅದನ್ನು ಅನೇಕ ಕಡೆ ಪ್ರಸ್ತುತಪಡಿಸಿರುವ ಇವರು ಶಾಸ್ತ್ರೀಯ ಸಂಗೀತದಲ್ಲಿ ಅಗಾಧ ಜ್ಞಾನವನ್ನು ಪಡೆದಿರುತ್ತಾರೆ. ಕೀಬೋರ್ಡ್ ನಲ್ಲಿ ಕೂಡಾ ಉತ್ತಮ ತರಬೇತಿ ಹೊಂದಿರುವ ಇವರು, ಅನೇಕ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. Youtube channel: https://youtube.com/@SangeethaVaahini ವಿ.ಸೂ : ಸಂಗೀತದಲ್ಲಿ ಉಚಿತ ಶಿಕ್ಷಣ ಪಡೆಯಲಿಚ್ಚಿಸುವವರಿಗೆ, ಪ್ರತಿ ಭಾನುವಾರ, ಕಲ್ಲಡ್ಕದಲ್ಲಿ ತರಗತಿ ಇರುತ್ತದೆ. ಉಚಿತ ಸಂಗೀತ ತರಗತಿಗೆ ಸೇರಲಿಚ್ಛಿಸುವವರು ಡಾ. ಮಹೇಶ ಪದ್ಯಾಣ ಇವರನ್ನು ಸಂಪರ್ಕಿಸಬಹುದು. ಮೊಬೈಲ್: 9448093317, https://youtube.com/@SangeethaVahini