ಕಲ್ಲಡ್ಕ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 46ನೇ ವರ್ಷದ ಶ್ರೀ ಶಾರದಾ ಮಹೋತ್ಸವ ಶ್ರೀ ಶಾರದಾ ಸೇವಾ ಪ್ರತಿಷ್ಠಾನ ವತಿಯಿಂದ ನಡೆಯಿತು. ಈ ಸಂದರ್ಭ ದಿ.ಕೆ.ಶಾಂತಾರಾಮ ಕಲ್ಲಡ್ಕ ಸ್ಮರಣಾರ್ಥ ಶಾಂತಶ್ರೀ ಪ್ರಶಸ್ತಿಯನ್ನು ಪ್ರಸಿದ್ಧ ದೈವನರ್ತಕ ರುಕ್ಮಯ ನಲಿಕೆ ಕೊಳಕೀರು ಅವರಿಗೆ ಪ್ರದಾನ ಮಾಡಲಾಯಿತು. 32 ಬಾರಿ ರಕ್ತದಾನ ಮಾಡಿದ ಕುಶಲ ಚೆಂಡೆ ಅವರಿಗೆ ಗ್ರಾಮ ಗೌರವ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭ ಮಾತನಾಡಿದ ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ, ಪವಿತ್ರ ಭಾರತದ ಭೂಮಿಯಲ್ಲಿ ದುಡಿದು ತಿನ್ನುವ ಕೈಗಳಾಗೋಣ, ನಮ್ಮೊಳಗಿನ ಬಿಕ್ಕಟ್ಟುಗಳನ್ನು ಬಿಟ್ಟು, ಜಾತಿವಾದವನ್ನು ಕುಟುಂಬಕ್ಕೆ ಸೀಮಿತವಾಗಿರಿಸಿ ಭವ್ಯ ಭಾರತದಲ್ಲಿ ತನ್ನತನವನ್ನು ಉಳಿಸಿಕೊಳ್ಳೋಣ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಬಿ ಸಿ ರೋಡ್ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷರಾದ ಭುವನೇಶ್ ಪಚ್ಚಿನಡ್ಕ ವಹಿಸಿದ್ದರು. ಈ ಸಂದರ್ಭ ಮಾತನಾಡಿದ ರುಕ್ಮಯ ನಲಿಕೆ ಕೊಳಕೀರು, ಶಾಂತರಾಮ ಕಲ್ಲಡ್ಕ ಅದೆಷ್ಟೋ ಕಲಾವಿದರ ಪ್ರತಿಭೆಯನ್ನು ಬೆಳಕಿಗೆ ತಂದಿದ್ದಾರೆ ಎಂದರು. ಕಳೆದ ಸಲದ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಎಲ್ಲಿ 90 ಶೇಕಡಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಗೋಳ್ತಮಜಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರೇಮ ಕೃಷ್ಣಕೋಡಿ, ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಿ ಕೆ ಅಣ್ಣು ಪೂಜಾರಿ, ಬ್ಯಾಂಕ್ ಆಫ್ ಬರೋಡ ಹುಬ್ಬಳ್ಳಿ ಮುಖ್ಯ ಪ್ರಬಂಧಕರಾದ ಸದಾಶಿವ ಆಚಾರ್ಯ, ಉದ್ಯಮಿ ಶೈಲೇಶ್ ಶೆಟ್ಟಿ ಕುಕ್ಕಮಜಲು, ಶ್ರೀ ಶಾರದಾ ಉತ್ಸವ ಸಮಿತಿಯ ಅಧ್ಯಕ್ಷರಾದ ಯೋಗೀಶ್ , ಕಾರ್ಯದರ್ಶಿ ಪ್ರಮಿತ್ ಕುಮಾರ್ ಉಪಸ್ಥಿತರಿದ್ದರು. ವಿಜಯ ಪ್ರಕಾಶ್ ಪ್ರಾರ್ಥಿಸಿ,ಶ್ರೀ ಶಾರದಾ ಪ್ರತಿಷ್ಠಾನದ ಅಧ್ಯಕ್ಷರಾದ ಯತೀನ್ ಕುಮಾರ್ ಪಂಚವಟಿ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ವಜ್ರನಾಥ ಕಲ್ಲಡ್ಕ ವಂದಿಸಿದರು. ರಾಜೇಶ್ ಕೊಟ್ಟಾರಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.