ತೆಂಗಿನ ಗೆರಟೆಯ ಮೂಲಕ ಕಲಾಕೃತಿಗಳನ್ನು ತಯಾರಿಸುವ ಇರಾ ಗ್ರಾಮದ ಸಚ್ಚೀಂದ್ರ ಅವರು ದಸರಾ ಹಬ್ಬದ ಸಂದರ್ಭದಲ್ಲಿ ಗೆರಟೆಯಿಂದಲೇ ಆಕರ್ಷಕ ಹುಲಿ ಮುಖವರ್ಣಿಕೆಯನ್ನು ರಚಿಸಿದ್ದಾರೆ.
ತೆಂಗಿನ ಗೆರಟೆ, ಗೆರಟೆ ಹುಡಿ, ಅಂಟು ಬಳಸಿ ಹುಲಿ ಮುಖವಾಡ ರಚಿಸಿದ್ದಾರೆ. ಸುಮಾರು 17 ದಿನಗಳ ಪರಿಶ್ರಮದಿಂದ ಸುಂದರವಾದ ಘರ್ಜಿಸುವ ಹುಲಿ ಮುಖ ಸಿದ್ದಗೊಂಡಿದೆ.ವ್ಯರ್ಥವಾಗಿ ಹೋಗುವ ತೆಂಗಿನ ಗೆರಟೆಳನ್ನು ಬಳಸಿಕೊಂಡು ಆಕರ್ಷಕ ಕಲಾಕೃತಿಗಳನ್ನು ಸಚ್ಚೀಂದ್ರ ಅವರು ರಚಿಸುತ್ತಾರೆ. ಇದೀಗ ಸಚ್ಚೀಂದ್ರ ಅವರ ಕೈಚಳಕದಲ್ಲಿ ಪ್ರಥಮ ಬಾರಿಗೆ ಹುಲಿ ಮುಖವರ್ಣಿಕೆ ತಯಾರಾಗಿದ್ದು, ಜನರನ್ನು ತನ್ನತ್ತ ಸೆಳೆಯುತ್ತಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…