ಬಂಟ್ವಾಳ: ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಅಕ್ಟೋಬರ್ 18ರ ಬುಧವಾರ ಸಂಜೆ 6ರಿಂದ 9ರವರೆಗೆ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ (ರಿ) ವತಿಯಿಂದ ಸೀತಾಪಹರಣ ಎಂಬ ಪಾರ್ತಿಸುಬ್ಬ ವಿರಚಿತ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಅಭಿರುಚಿ ಜೋಡುಮಾರ್ಗ ಅವರು ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಿದ್ದಾರೆ.
ಹಿಮ್ಮೇಳದಲ್ಲಿ ಭಾಗವತರಾಗಿ ಅನಂತ ಹೆಗಡೆ ದಂತಳಿಗೆ, ಮದ್ದಳೆ ಮೂರೂರು ನರಸಿಂಹ ಹೆಗಡೆ, ಚೆಂಡೆ ವಿನಾಯಕ ಭಟ್ರಮನೆ ಭಾಗವಹಿಸುವರು.
ಮುಮ್ಮೆಳದಲ್ಲಿ ಕೆರೆಮನೆ ಶಿವಾನಂದ ಹೆಗಡೆ, ಶಿರಳಗಿ ತಿಮ್ಮಪ್ಪ ಹೆಗಡೆ, ಈಶ್ವರ ಭಟ್ಟ ಹಂಸಳ್ಳಿ, ವಿಘ್ನೇಶ್ವರ ಹೆಗಡೆ ಹಾವಗೋಡಿ, ಕೆರೆಮನೆ ಶ್ರೀಧರ ಹೆಗಡೆ, ನಿರಂಜನ ಹೆಗಡೆ, ವಿನಾಯಕ ನಾಯ್ಕ ಗುಂಡಿಬೈಲು, ಕೃಷ್ಣ ಮರಾಠಿ ಮುಂಡಾರ, ಗಣಪತಿ ಕುಣಬಿ ಯಲ್ಲಾಪುರ, ನಕುಲ ಗೌಡ ಸಿರ್ಸಿ ಭಾಗವಹಿಸುವರು. ಸ್ತ್ರೀಪಾತ್ರದಲ್ಲಿ ಸದಾಶಿವ ಭಟ್ಟ ಯಲ್ಲಾಪುರ, ಮಹಾವೀರ ಇಂದ್ರ ಜೈನ, ಹಾಸ್ಯಪಾತ್ರದಲ್ಲಿ ಸೀತಾರಾಮ ಹೆಗಡೆ ಮುಡಾರೆ ಇರಲಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…