ಪಾಣೆಮಂಗಳೂರಿನ ಶ್ರೀ ವಿಠ್ಠಲ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 99ನೇ ವರ್ಷದ ಶ್ರೀ ಶಾರದಾ ಮಹೋತ್ಸವ ಅಕ್ಟೋಬರ್ 20ರಿಂದ 24ರವರೆಗೆ ನಡೆಯಲಿದೆ ಎಂದು ಶ್ರೀ ಶಾರದಾ ಪೂಜಾ ಮಹೋತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
20ರಂದು ಶುಕ್ರವಾರ ಶ್ರೀ ದೇವಿ ಮೆರವಣಿಗೆ ಶ್ರೀ ವೀರವಿಠ್ಠಲ ವೆಂಕಟರಮಣ ಸ್ವಾಮಿ ದೇವಸ್ಥಾನದಿಂದ ಶ್ರೀದೇವಿಯ ಮೆರವಣಿಗೆ ನಡೆಯಲಿದೆ. ಬಳಿಕ ಶ್ರೀದೇವಿಯ ಪ್ರತಿಷ್ಠೆ ನಡೆಯಲಿದ್ದು, 20ರಿಂದ 24ರವರೆಗೆ ಭಜನಾ ಸಂಕೀರ್ತನೆ ಪ್ರತಿದಿನ ನಡೆಯಲಿದೆ. ಬೆಳಗ್ಗೆ 11.30ಕ್ಕೆ ಮತ್ತು ರಾತ್ರಿ 8.30ಕ್ಕೆ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿತರಣೆ ಇರಲಿದೆ. 22ರಂದು ಭಾನುವಾರ ಪಂಚದುರ್ಗಾನಮಸ್ಕಾರ, ಪುಷ್ಪಾಂಜಲಿ, ಮಹಾಪೂಜೆ ಸಂಜೆ ನಡೆಯಲಿದೆ. 24ರ ಮಂಗಳವಾರ ರಾತ್ರಿ 9ಕ್ಕೆ ಮಹಾಪೂಜೆ ಬಳಿಕ ಶ್ರೀದೇವಿಯ ವಿಸರ್ಜನಾ ಪೂಜೆ, ಭವ್ಯ ಶೋಭಾಯಾತ್ರೆ, ವೇಷಧಾರಿಗಳಿಂದ ಪ್ರತಿಭಾ ಪ್ರದರ್ಶನ, ಜಲಸ್ತಂಭನ ನಡೆಯಲಿದೆ. 20ರಂದು ಸಂಜೆ 6.30ಕ್ಕೆ ಎಸ್.ವಿ.ಎಸ್.ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ನೃತ್ಯವೈವಿಧ್ಯ, 21ರಂದು ಶನಿವಾರ ಸಂಜೆ 6.30ರಿಂದ ಶ್ರೀಶಾರದಾ ಪ್ರೌಢಶಾಲೆ, ಎಸ್.ಎಲ್.ಎನ್.ಪಿ. ವಿದ್ಯಾಲಯ ವಿದ್ಯಾರ್ಥಿಗಳಿಂದ ನೃತ್ಯವೈವಿಧ್ಯ, 24ರ ಮಂಗಳವಾರ ಸಂಜೆ 4ರಿಂದ 6ರವರೆಗೆ ಶ್ರೀನಾರಿಕುಂಬೇಶ್ವರ ಯಕ್ಷಗಾನ ಸಂಘ ನರಿಕೊಂಬು ಇವರಿಂದ ವಾಲಿಸುಗ್ರೀವ ಕಾಳಗ ತಾಳಮದ್ದಳೆ ನಡೆಯಲಿದೆ. 22ರ ಭಾನುವಾರದಿಂದ 24ರ ಮಂಗಳವಾರದವರೆಗೆ ಬೆಳಗ್ಗೆ 11ರಿಂದ 1ರವರೆಗೆ ಶ್ರೀ ದೇವಿ ಸನ್ನಿಧಿಯಲ್ಲಿ ಅಕ್ಷರಾಭ್ಯಾಸ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಕೆ.ಎನ್.ಆರ್. ಕನ್ಸಸ್ಟ್ರಕ್ಷನ್ಸ್ ಗುತ್ತಿಗೆ ವಹಿಸಿಕೊಂಡಿರುವ ಬಿ.ಸಿ.ರೋಡ್ ಭಾಗದ ಕಾಮಗಾರಿಯಲ್ಲಿ ಸೇತುವೆ ಪೂರ್ಣಗೊಳಿಸಿ ಓಡಾಟ ಆರಂಭಗೊಂಡಿರುವುದು ಮಹತ್ವದ ಹೆಜ್ಜೆಯಾಗಿದ್ದು, ಬಿ.ಸಿ.ರೋಡ್ ಸರ್ಕಲ್…