ದೇಶದ ಆಡಳಿತ ಫ್ಯಾಸಿಸ್ಟರ ಕೈಯಲ್ಲಿದ್ದು, ಒಂದೇ ದೇಶ, ಒಂದು ಚುನಾವಣೆ ನಡೆಸುವ ಹುನ್ನಾರ ನಡೆಸಲಾಗುತ್ತಿದೆ. ದೇಶಕ್ಕೆ ಅಪಾಯಕಾರಿ ಆಗಿರುವ ಫ್ಯಾಸಿಸಂ ತೊಲಗಿಸಲು ಮುಂದಿನ ಚುನಾವಣೆಯಲ್ಲಿ ಜಾತ್ಯತೀತ ಎಡ ಶಕ್ತಿಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಸಿಪಿಎಂಎಲ್ ಮುಖಂಡ ಪಾಲಿಟ್ ಬ್ಯುರೊ ಸದಸ್ಯ ಶಂಕರ್ ಅಭಿಪ್ರಾಯಪಟ್ಟರು.
ಬಂಟ್ವಾಳದ ಬಿ.ಸಿ.ರೋಡಿನಲ್ಲಿ ನಡೆದ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ,ಲೆನಿನ್ ವಾದಿ) ಲಿಬರೇಷನ್ ತಾಲೂಕು ಸಮ್ಮೇಳನದಲ್ಲಿ ಅವರು ಮಾತನಾಡಿದರು. ರಾಜ್ಯ ಸಮಿತಿ ಸದಸ್ಯಾದ ಮೋಹನ್.ಕೆ.ಇ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪಕ್ಷದ ಮಂಗಳೂರು ತಾಲೂಕು ಕಾರ್ಯದರ್ಶಿ ಭರತ್ ಕುಮಾರ್ ಮಾತನಾಡಿದರು ಸಮ್ಮೇಳನದ ಅದ್ಯಕ್ಷತೆಯನ್ನು ರಾಮಣ್ಣ ವಿಟ್ಲ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಾಮಾಜಿಕ ಕಾರ್ಯಕರ್ತರಾದ ರಾಜಾ ಚೆಂಡ್ತಿಮಾರ್, ಸರಸ್ವತಿ ಮಾಣಿ, ಅಶ್ರಪ್ ಕೊಯಿಲ ಭಾಗವಹಿಸಿದ್ದರು. ತುಳಸೀದಾಸ್ ವಿಟ್ಲ ಸ್ವಾಗತಿಸಿ ಸಮ್ಮೇಳನದ ವರದಿ ಮಂಡಿಸಿದರು.
ಸಮ್ಮೇಳನದಲ್ಲಿ ನೂತನ ತಾಲೂಕು ಸಮಿತಿ ರಚಿಸಲಾಯಿತು ಕಾರ್ಯದರ್ಶಿಯಾಗಿ ತುಳಸೀದಾಸ್ ವಿಟ್ಲ, ಸದಸ್ಯರುಗಳಾಗಿ ಶಿವರಾಯ ಪ್ರಭು, ಸರಸ್ವತಿ ಮಾಣಿ, ದಿನೇಶ ಆಚಾರಿ ಮಾಣಿ, ದೇವಪ್ಪ ಗೌಡ ಕನ್ಯಾನ, ಸಜೇಶ್ ವಿಟ್ಲ, ಬಾಲಕೃಷ್ಣ ಚೇಳೂರು, ರಾಜಾ ಚೆಂಡ್ತಿಮಾರ್ ಹಮೀದ್ ಕುಕ್ಕಾಜೆ, ಲಿಯಕತ್ ಖಾನ್ , ಆನಂದ ಶೆಟ್ಟಿಗಾರ್ ಆಯ್ಕೆಯಾದರು.