ಬಂಟ್ವಾಳ

ಬಂಟ್ವಾಳದಲ್ಲಿ ರಂಗ ಸಂಗೀತ ಕಾರ್ಯಕ್ರಮ

ಮಂಗಳೂರಿನ ಜರ್ನಿ ಥೇಟರ್ ಗ್ರೂಪ್ ಪ್ರಸ್ತುತಪಡಿಸುವ ರಂಗಸಂಗೀತ ಹಾಗೂ ಜನಪದ ಗೀತೆಗಳು ಕಾರ್ಯಕ್ರಮ ಬಿ.ಸಿ.ರೋಡಿನ ಕನ್ನಡ ಭವನದಲ್ಲಿ ‘ಅಭಿರುಚಿ’ ಜೋಡುಮಾರ್ಗ ವತಿಯಿಂದ ಏರ್ಪಡಿಸಲಾಯಿತು.

ಕನ್ನಡದ ಹವ್ಯಾಸಿ ನಾಟಕಗಳಿಂದ ಆಯ್ದ ಗೀತೆಗಳನ್ನು ಪ್ರಸ್ತುತಪಡಿಸಲಾಯಿತು. 1970ರ ದಶಕದಲ್ಲಿ ಪ್ರದರ್ಶನಗೊಂಡ ‘ಹಯ ವದನ’ ನಾಟಕದ ‘ಗಜವದನ ಹೇರಂಭ’ ರಿಂದ ತೊಡಗಿದ ಕಾರ್ಯಕ್ರಮ ನಿನಗೆ ನೀನೇ ಗೆಳತಿ ‘ ,ಪಂಜರ ಶಾಲೆ ‘,ಹುತ್ತವ ಬಡಿದರೆ ‘, ಚಿತ್ರಪಟ ರಾಮಾಯಣ ‘, ನವೀನ ಸದಾರಮೆ’, ಗೋಕುಲ ನಿರ್ಗಮನ’, ‘ಅಗ್ನಿವರ್ಣ’ ಮುಂತಾದ ನಾಟಕಗಳಿಂದ ಆಯ್ದ ಗೀತೆಗಳನ್ನು ಹಾಡಲಾಯಿತು. ಆಧುನಿಕ ಕನ್ನಡ ರಂಗಭೂಮಿ ನಡೆದು ಬಂದ ದಾರಿಯನ್ನೂ ನೆನಪಿಸಿದ ಕಾರ್ಯಕ್ರಮದಲ್ಲಿ ರಂಗ ಸಂಗೀತ ಕ್ಷೇತ್ರಕ್ಕೆ ‘ರಂಗ ಜಂಗಮ’ ಎಂದೇ ಖ್ಯಾತರಾದ ಬಿ.ವಿ.ಕಾರಂತರು ನೀಡಿದ ಹೊಸ ಆಯಾಮ,ಮಹತ್ತರ ಕೊಡುಗೆಯನ್ನು ನೆನೆಯುವಂತೆ ಮಾಡಿತು  ಕವಿ ರಾಧೇಶ ತೋಳ್ಪಾಡಿ ಪ್ರಸ್ತಾವನೆಯ ಮಾತುಗಳೊಂದಿಗೆ ಸ್ವಾಗತಿಸಿದರು. ಪ್ರಾಧ್ಯಾಪಕ ಚೇತನ್ ಮುಂಡಾಜೆ ವಂದಿಸಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ