ಬಂಟ್ವಾಳ

ಬಂಟ್ವಾಳ ಜಮೀಯತುಲ್ ಫಲಾಹ್ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ, ಸನ್ಮಾನ ಹಾಗೂ ತರಬೇತಿ

ಬಂಟ್ವಾಳ: ಜಮೀಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕದ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ, ಸನ್ಮಾನ ಹಾಗೂ ತರಬೇತಿ ಕಾರ್ಯಕ್ರಮ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಸೋಮವಾರ ನಡೆಯಿತು.

ವಿದ್ಯಾರ್ಥಿ ವೇತನ ವಿತರಿಸಿದ ಪೂರ್ವ ಲಯನ್ಸ್ ಜಿಲ್ಲಾ ಗವರ್ನರ್ ವಸಂತ ಕುಮಾರ್ ಶೆಟ್ಟಿ ಮಾತನಾಡಿ ಶೈಕ್ಷಣಿಕ ಸಬಲೀಕರಣವು ಸಮಾಜ ಹಾಗೂ ಸಮುದಾಯದ ಸಮಸ್ಯೆಗಳಿಗೆ ಒಂದು ಶಾಶ್ವತ ಪರಿಹಾರವಾಗಿದೆ, ಆರ್ಥಿಕವಾಗಿ ದುರ್ಬಲರಿಗೆ ಹಲವು ದಶಕಗಳಿಂದ ಶೈಕ್ಷಣಿಕ ಬೆಂಬಲ ನೀಡಿ ಸಮಾಜ ಪರಿವರ್ತನೆಯಲ್ಲಿ ಜಮೀಯ್ಯತುಲ್ ಫಲಾಹ್ ಮಹತ್ವದ ಪಾತ್ರ ವಹಿಸಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಮೀಯ್ಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕಾದ್ಯಕ್ಷ ರಶೀದ್ ಸಂಸ್ಥೆಯ ಕಾರ್ಯ ವೈಖರಿಯ ಬಗ್ಗೆ ಮಾಹಿತಿ ನೀಡಿದರು.

ಸಂಸ್ಥೆಯ ದ.ಕ ಮತ್ತು ಉಡುಪಿ ಜಿಲ್ಲಾಧ್ಯಕ್ಷ ಕೆ.ಕೆ.ಸಾಹುಲ್ ಹಮೀದ್,  ಕೋಶಾಧಿಕಾರಿ ನ್ಯಾಯವಾದಿ ಕೆ.ಎಂ.ಸಿದ್ದೀಕ್ ಪುತ್ತೂರು, ಉದ್ಯಮಿ  ಬಿ.ಮುಹಮ್ಮದ್ ಅಮ್ಮುಂಜೆ – ಸುರಲ್ಪಾಡಿ, ಸಂಸ್ಥೆಯ ಅಜೀವ ಸದಸ್ಯ ಬಿ.ಕೆ.ಅಬ್ದುಲ್ ಕುಂಞಿ ಹಾಜಿ ಬೈರಿಕಟ್ಟೆ ಅತಿಥಿಗಳಾಗಿ ಭಾಗವಹಿಸಿದ್ದರು. ಕೋಶಾಧಿಕಾರಿ ಎಂ.ಎಚ್.ಇಕ್ಬಾಲ್ ಉಪಸ್ಥಿತರಿದ್ದರು. ಇದೇ ವೇಳೆ ‌ಪೂನಾದ ಡಾ.ಡಿ.ವೈ. ಪಾಟೀಲ್ ಅಂತಾರಾಷ್ಟ್ರೀಯ ವಿಶ್ವ ವಿದ್ಯಾನಿಲಯದ ಕುಲಸಚಿವ ಡಾ.ಬೀರಾನ್ ಮೊಯ್ದಿನ್ ಬಿ.ಎಂ, ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ.ಯ ಡಾಕ್ಟರೇಟ್ ಪದವೀದರೆ ಡಾ.ರಶೀದಾ ಸೇರಂತಿಮಠ, 2023 ರ ಲೆಕ್ಕ ಪರಿಶೋಧಕ ಪರೀಕ್ಷಾ ಉತ್ತೀರ್ಣ ಅಭ್ಯರ್ಥಿ ಮೊಹಮ್ಮದ್ ಫಾರಿಸ್ ಖಾದರ್, 2023 ರ ನೀಟ್ ಪರೀಕ್ಷೆಯಲ್ಲಿ 180 ನೇ ರಾಂಕ್ ಪಡೆದ ವಿದ್ಯಾರ್ಥಿ ಶಾಮಿಕ್ ಅಬ್ದುಲ್ ರಹಿಮಾನ್, ಹಾಗೂ ಶುಚಿತ್ವ ಮತ್ತು ಪಕ್ಷಿ ಪ್ರೇಮಿ ಬೀರಾನ್ ಕುಂಞ (ಬೀರಾಂಚ) ಅವರನ್ನು ಸನ್ಮಾನಿಸಲಾಯಿತು.  ಬೊಳಂತಿಮುಗೇರ್ ಉರ್ದು ಶಾಲಾ ಶಿಕ್ಷಕಿಗೆ ಗೌರವಧನ ವಿತರಿಸಲಾಯಿತು. ಸಂಸ್ಥೆಯ ಅಜೀವ ಸದಸ್ಯರಾಗಿ ಸೇರ್ಪಡೆಗೊಂಡ ಶಾಕಿರ್ ಅಳಕೆ ಮಜಲು, ಹನೀಫ್ ಕುದ್ದುಪದವು, ಅಶ್ರಫ್ ಕೆ.ಸಿ.ರೋಡ್, ಉಬೈದುಲ್ಲಾ ವಿಟ್ಲ ಬಝಾರ್, ಕೆ.ಎಸ್. ಮೊಹಮ್ಮದ್ ರಾಝಿಕ್ ವಿಟ್ಲ ಹಾಗೂ ಅಬೂಬಕ್ಕರ್ ಪುತ್ತು ಇವರನ್ನು ಗೌರವಿಸಲಾಯಿತು. ಅಬ್ದುಲ್ ರಝಾಕ್ ಅನಂತಾಡಿ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮ ನಡೆಸಿಕೊಟ್ಟರು. ಜಮೀಯತುಲ್ ಫಲಾಹ್ ಅಜೀವ ಸದಸ್ಯ ಮಹಮ್ಮದ್ ವಳವೂರು, ಪೂರ್ವಾಧ್ಯಕ್ಷ ಸುಲೈಮಾನ್ ಸೂರಿಕುಮೇರ್, ಉಪಾಧ್ಯಕ್ಷ ಲತೀಫ್ ನೇರಳಕಟ್ಟೆ ಸನ್ಮಾನಿತರನ್ನು ಪರಿಚಯಿಸಿದರು. ಅಬ್ದುಲ್ ಕರೀಂ ಹಾಗೂ ಪಿ.ಮುಹಮ್ಮದ್ ಸಹಕರಿಸಿದರು. ಘಟಕಾದ್ಯಕ್ಷ ರಶೀದ್ ವಿಟ್ಲ ಸ್ವಾಗತಿಸಿ, ಬಿ.ಎಂ.ಅಬ್ಬಾಸ್ ಅಲಿ ವಂದಿಸಿದರು. ಆಶಿಕ್ ಕುಕ್ಕಾಜೆ ಕಿರಾಅತ್ ಪಠಿಸಿದರು. ಬಿ.ಎಂ.ತುಂಬೆ ಕಾರ್ಯಕ್ರಮ ನಿರೂಪಿಸಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ