ಸಾಮಾಜಿಕ ಭದ್ರತಾ ಯೋಜನೆಯಡಿ ಬರುವ ವಿವಿಧ ಪಿಂಚಣಿಗಳನ್ನು ಆಧಾರ್ ಆಧಾರಿತ ನೇರ ಹಣ ಸಂದಾಯ ಯೋಜನೆಯಾಗಿ ತರಲು ತೀರ್ಮಾನಿಸಿದ್ದು, ಯೋಜನೆಗಳನ್ನು ಕಾರ್ಯಗತಗೊಳಿಸಲು ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಎನ್.ಪಿ.ಸಿ.ಐ. (ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಆಫ್ ಇಂಡಿಯಾ) ಲಿಂಕ್ ಮಾಡಬೇಕಾಗಿರುತ್ತದೆ. ಇಲ್ಲದಿದ್ದರೆ ಪಿಂಚಣಿ ಸಂಬಂಧಿತ ಬ್ಯಾಂಕ್ ಖಾತೆಗೆ ಜಮೆಯಾಗುವುದಿಲ್ಲ ಎಂದು ಬಂಟ್ವಾಳ ತಹಸೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಮಾಜಿಕ ಭದ್ರತಾ ಯೋಜನೆಯಡಿ ಬರುವ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಪೈಕಿ ಎನ್.ಪಿ.ಸಿ.ಐ. ಪೋರ್ಟಲ್ ನಲ್ಲಿ ಮತ್ತು ಪಿ.ಕೆ.ವೈ.ಸಿ. ನಲ್ಲಿ ಮ್ಯಾಪಿಂಗ್ ಮಾಡದಿರುವ ಪಿಂಚಣಿದಾರರು ಆಧಾರ್ ಹಾಗೂ ಮೊಬೈಲ್ ನಂಬ್ರ ಬ್ಯಾಂಕ್ /ಅಂಚೆ ಖಾತೆಯೊಂದಿಗೆ ಸಂಬಂಧಪಟ್ಟ ಬ್ಯಾಂಕ್ /ಅಂಚೆ ಕಚೇರಿಗೆ ತೆರಳಿ ಸೆ.30ರೊಳಗೆ ಎನ್.ಪಿ.ಸಿ.ಐ.ಗೆ ಲಿಂಕ್ ಮಾಡಿಸಲು ಕೋರಿದೆ. ಬಾಕಿ ಇರುವ ಪಿಂಚಣಿದಾರರ ವಿವರವನ್ನು ತಮ್ಮ ಗ್ರಾಮದ ಗ್ರಾಮಆಡಳಿತ ಅಧಿಕಾರಿ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ತಹಸೀಲ್ದಾರ್ ಎಸ್.ಬಿ.ಕೂಡಲಗಿ ತಿಳಿಸಿದ್ದಾರೆ.