ವೀರಕಂಭ ಗ್ರಾಮ ಅರಣ್ಯ ಸಮಿತಿ ವಾರ್ಷಿಕ ಮಹಾಸಭೆ ಕೆಲಿಂಜ ಸಾಮಾಜಿಕ ಅರಣ್ಯ ವಲಯ ಕಚೇರಿಯಲ್ಲಿ ನಡೆಯಿತು. ಮಂಗಳೂರು ವಿಭಾಗದ ಬಂಟ್ವಾಳ ವಲಯದ ವತಿಯಿಂದ,ಕರ್ನಾಟಕ ಸುಸ್ಥಿರ ಅರಣ್ಯ ನಿರ್ವಹಣೆ ಮತ್ತು ಜೀವವೈವಿಧ್ಯ ಸಂರಕ್ಷಣಾ ಯೋಜನೆಯಡಿ ಸ್ಥಾಪಿಸಲಾದ ವೀರಕಂಭ ಗ್ರಾಮ ಅರಣ್ಯ ಸಮಿತಿ’ಯ ಮಹಾಸಭೆ ಅಧ್ಯಕ್ಷತೆಯನ್ನು ವೀರಕಂಭ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ವಿಶ್ವನಾಥ ಎಂ.ವಹಿಸಿದ್ದರು.
ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿನ ಲಭ್ಯತೆಗಾಗಿ ಹಾಗೂ ಜಲಸರಂಕ್ಷಗಾಗಿ ಸುಮಾರು 4.69 ಲಕ್ಷವೆಚ್ಚದಲ್ಲಿ ಕಲ್ಮಲೆ ಹಾಗೂ ಮೈರದಲ್ಲಿ ಬಾವಿ ನಿರ್ಮಾಣ ಮಾಡಲಾಗಿದೆ.ಕಳೆದ ವರ್ಷ ತಾಪಮಾನ ಏರಿಕೆಯ ಸಂದರ್ಭ ಕೆಲಿಂಜ ಸಹಿತ ಅನೇಕ ಕಡೆಗಳಲ್ಲಿ ಬೆಂಕಿ ಬಿದ್ದು ಅರಣ್ಯ ಹಾಗೂ ಪ್ರಾಣಿಗಳಿಗೆ ತೊಂದರೆಯಾಗಿದೆ. ಇಂಥ ಘಟನೆಗಳು ಆಗದಂತೆ ಯಾವ ರೀತಿ ತಡೆಯಲು ಸಾಧ್ಯವಿದೆ ಎಂಬ ಕುರಿತು ಚಿಂತನೆ ನಡೆಯಬೇಕು ಎಂದವರು ಹೇಳಿದರು.
ವೀರಕಂಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಾ ಕಾರ್ಯಕ್ರಮ ಉದ್ಘಾಟಿಸಿದರು. ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಪಿ.ಎಲ್.ಡಿ.ಬ್ಯಾಂಕ್ ಉಪಾಧ್ಯಕ್ಷ ಚಂದ್ರಶೇಖರ ಬಾಯಿಲ, ಗ್ರಾಮ ಪಂಚಾಯಿತಿ ಸದಸ್ಯ ಜಯಪ್ರಸಾದ್, ಉಪವಲಯ ಅರಣ್ಯಾಧಿಕಾರಿ ಪ್ರೀತಂ, ಗಸ್ತು ವನಪಾಲಕರಾದ ಶೋಭಿತ್, ದಯಾನಂದ, ಅರಣ್ಯ ವೀಕ್ಷಕ ಪ್ರವೀಣ್ ಕೆ ಹಾಗೂ ಸಮಿತಿ ಸದಸ್ಯರು ಪ್ರಮುಖರು ಉಪಸ್ಥಿತರಿದ್ದರು. ತೇಜಸ್ವಿ ಸ್ವಾಗತಿಸಿ ಶಶಿಕಲಾ ವಂದಿಸಿದರು. ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು
ಕೆ.ಎನ್.ಆರ್. ಕನ್ಸಸ್ಟ್ರಕ್ಷನ್ಸ್ ಗುತ್ತಿಗೆ ವಹಿಸಿಕೊಂಡಿರುವ ಬಿ.ಸಿ.ರೋಡ್ ಭಾಗದ ಕಾಮಗಾರಿಯಲ್ಲಿ ಸೇತುವೆ ಪೂರ್ಣಗೊಳಿಸಿ ಓಡಾಟ ಆರಂಭಗೊಂಡಿರುವುದು ಮಹತ್ವದ ಹೆಜ್ಜೆಯಾಗಿದ್ದು, ಬಿ.ಸಿ.ರೋಡ್ ಸರ್ಕಲ್…