ನೇತ್ರಾವತಿ ನದಿ ಸೇತುವೆಯಲ್ಲಿ ಬೈಕ್ ಸವಾರನೋರ್ವ ಲಾರಿ ಡಿಕ್ಕಿಯಾಗಿ ಸಾವನ್ನಪ್ಪಿದ ಘಟನೆ ಭಾನುವಾರ ಬೆಳಗ್ಗೆ ಬಿ.ಸಿ.ರೋಡಿನಲ್ಲಿ ನಡೆದಿದೆ. ಬಿ.ಸಿ.ರೋಡಿನಿಂದ ಹಾಸನ ಕಡೆ ತೆರಳುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನೇತ್ರಾವತಿ ನದಿ ಸೇತುವೆಯ ಮೇಲ್ಭಾಗ ಈ ಘಟನೆ ನಡೆದಿದ್ದು, ರಾಜ್ ಕುಮಾರ್ ಮಯ್ಯ ಸಾವನ್ನಪ್ಪಿದ್ದಾರೆ.
ಸಜಿಪ ಬೆಂಕ್ಯ ಎಂಬಲ್ಲಿನ ನಿವಾಸಿ, ವಾಸುದೇವ ಮಯ್ಯ ಅವರ ಹಿರಿಯ ಪುತ್ರ ರಾಜಕುಮಾರ್ ಅವರು ವಾಮದಪದವಿನಲ್ಲಿ ನೆಲೆಸಿದ್ದರು. ಅಲ್ಲಿಂದ ಸಜಿಪದ ಮನೆಗೆ ಬರುತ್ತಿದ್ದ ಸಂದರ್ಭ ನಿರ್ಮಾಣ ಕಂಪನಿಯೊಂದಕ್ಕೆ ಸೇರಿದ ಲಾರಿಯೊಂದು ಡಿಕ್ಕಿಯಾಗಿದೆ. ಈ ರಭಸಕ್ಕೆ ಬೈಕ್ ಸವಾರ ಗಂಭೀರವಾಗಿ ಗಾಯಯೊಂಡಿದ್ದು,. ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾರೆ.ಘಟನಾ ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.