ಬಂಟ್ವಾಳದ ಶಿಶು ಅಭಿವೃದ್ಧಿ ಇಲಾಖೆ, ಫಜೀರಿನ ಆರೋಗ್ಯ ಕ್ಷೇಮ ಕೇಂದ್ರ, ಗ್ರಾಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಪೋಷಣ್ ಮಾಸಾಚರಣೆ ಫಜೀರಿನಲ್ಲಿ ನಡೆಯಿತು.
ಪೋಷಣ್ ಮಾಸಾಚರಣೆಯ ಉದ್ದೇಶ, ಪ್ರಯೋಜನಗಳ ಮಾಹಿತಿಯನ್ನು ಮೇಲ್ವಿಚಾರಕಿ ಶೋಭಾ ಎಂ. ನೀಡಿದರು. ಪಂಚಾಯಿತಿ ಅಧ್ಯಕ್ಷ ರಫೀಕ್ ಫಜೀರ್ ಅವರು ಪೌಷ್ಠಿಕ ಆಹಾರಗಳ ಬಗ್ಗೆ ಆರೋಗ್ಯದ ಕುರಿತು ತಿಳಿಸಿದರು. ಸಾಮಾಜಿಕ ಕಾರ್ಯಕರ್ತರಾದ ಶಮೀರ್ ಅವರು ಅಂಗನವಾಡಿಯಲ್ಲಿ ಸಿಗುವ ಆಹಾರದಿಂದ ಸಿಗುವ ಪ್ರಯೋಜನ ಮತ್ತು ಸಂಜೀವಿನಿ ಒಕ್ಕೂಟದ ಕುರಿತು ಮಾಹಿತಿ ನೀಡಿದರು.
ಸಮುದಾಯ ಆರೋಗ್ಯಾಧಿಕಾರಿ ನಯನಾ ಮತ್ತು ಶಬಾನಾ ಸಮತೋಲನ ಆಹಾರದ ಕುರಿತು ಮಾಹಿತಿ ನೀಡಿದರು. ಪ್ರಾತ್ಯಕ್ಷಿಕೆಯನ್ನು ಅಂಗನವಾಡಿ ಕಾರ್ಯಕರ್ತೆ ಗ್ರೆಟ್ಟಾ ಲೋಬೊ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಫ್ಲಾಸಿಡಾ ಕಾರ್ಯಕ್ರಮ ನಿರೂಪಿಸಿದರು. ಲಿಲ್ಲಿ ಅಪ್ಲೇಸ್ ಸ್ವಾಗತಿಸಿದರು. ಅಂಗನವಾಡಿ ಕಾರ್ಯಕರ್ತೆ ನಮಿತಾ ವಂದಿಸಿದರು.