ಕರ್ನಾಟಕ ರಾಜ್ಯ ಸಹಕಾರ ಕ್ರಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಬೆಂಗಳೂರು ವಾರ್ಷಿಕ ಮಹಾಸಭೆಯಲ್ಲಿ ವಸೂಲಾತಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಅರುಣ್ ರೋಶನ್ ಡಿ ಸೋಜ ಪ್ರಶಸ್ತಿ ಸ್ವೀಕರಿಸಿದರು. ಕಾಸ್ಕಾರ್ಡ್ ಬ್ಯಾಂಕಿನ ಅಧ್ಯಕ್ಷರು, ಶಾಸಕರಾದ ಷಡಕ್ಷರಿ ಪ್ರಶಸ್ತಿ ವಿತರಿಸಿದರು. ಬಂಟ್ವಾಳ ಬ್ಯಾಂಕಿನ ವ್ಯವಸ್ಥಾಪಕ ಪದ್ಮನಾಭ ಜಿ .ಮತ್ತು ಕಾಸ್ಕಾರ್ಡ್ ಬ್ಯಾಂಕಿನ ಜಿಲ್ಲಾ ನಿರ್ದೇಶಕರಾದ ರಾಜಶೇಖರ ಜೈನ್ ಉಪಸ್ಥಿತರಿದ್ದರು.