ಕಲ್ಲಡ್ಕ

ಚಿಟ್ಟೆಗಳ ಜೀವನಚಕ್ರ ಹೇಗಿರುತ್ತದೆ? ಶ್ರೀರಾಮ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಅಧ್ಯಯನ ಕಾರ್ಯಾಗಾರ

ಬಂಟ್ವಾಳ: ಚಿಟ್ಟೆಗಳ ಜೀವನಚಕ್ರ ಹೇಗಿರುತ್ತದೆ ಎಂಬ ಪ್ರತ್ಯಕ್ಷದರ್ಶನವನ್ನು ಕಲ್ಲಡ್ಕದ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ನೀಡುವ ಕಾರ್ಯ ನಡೆಸಲಾಯಿತು.

ಜಾಹೀರಾತು

ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವಿಜ್ಞಾನ ಸಂಘದ ವಿದ್ಯಾರ್ಥಿಗಳು ಚಿಟ್ಟೆಗಳ ಜೀವನಚಕ್ರದ ನಾಲ್ಕು ಹಂತಗಳನ್ನು ಶಾಲಾ ಪರಿಸರದಲ್ಲಿ ಮೂರು ವಾರಗಳಿಂದ ವಿವಿಧ ಹಂತದಲ್ಲಿ ನಿರಂತರ ಅಧ್ಯಯನ ಮಾಡಿದರು. ಇವುಗಳಲ್ಲಿ ಮೊಟ್ಟೆ , ಲಾರ್ವ, ಪೊರೆ, ಮತ್ತು ವಯಸ್ಕ ಹಂತದ ಬಗ್ಗೆ ತಿಳಿದುಕೊಂಡು ಮೊಟ್ಟೆಯಿಂದ ಚಿಟ್ಟೆಗಳು ಹೊರಬರುವ ಹಂತದವರೆಗೆ ಗಮನಿಸಿ, ಮಾಡಿ ಪ್ರತಿ ಹಂತವನ್ನು ದಾಖಲಿಸಿ ಲಾರ್ವದಿಂದ ಹೊರಬಂದ ಚಿಟ್ಟೆಯ ಚಟುವಟಿಕೆಗಳನ್ನು ವೀಕ್ಷಿಸಿದರು. ನಂತರ ವಿದ್ಯಾರ್ಥಿಗಳು ಲಾರ್ವದಿಂದ ಹೊರಬಂದ ಸರಿಸುಮಾರು ನೂರು ಚಿಟ್ಟೆಗಳನ್ನು ಪರಿಸರಕ್ಕೆ ಬಿಡುವ ಮೂಲಕ ಮಾದರಿಯಾದರು.

ತರಬೇತುದಾರರಾದ ರಮ್ಯ ಜೆ ಮಂಚಿ ಮಾತನಾಡಿ ಜೀವನ ಚಕ್ರವು ಅತ್ಯಂತ ವಿಶಿಷ್ಟವಾದದ್ದು ಶಾಲೆಯಲ್ಲಿ ಇದರ ಕಾರ್ಯಗಾರವನ್ನು ನಡೆಸಿರುವುದರಿಂದಾಗಿ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ, ಪರಿಸರ ಕಾಳಜಿಯೊಂದಿಗೆ ಸಂಶೋಧನಾ ಚಟುವಟಿಕೆಗಳು ಪ್ರಾಥಮಿಕ ಹಂತದಿಂದಲೇ ಬೆಳೆಯುವುದು.ಎಂದರು.

ಏಳನೇ ತರಗತಿಯ ವಿದ್ಯಾರ್ಥಿಯಾಗಿರುವ ಕೃಷ್ಣಕುಮಾರ ಮಾತನಾಡಿ, ಶಾಲೆಯಲ್ಲಿ ನಡೆಸಿದ ಈ ಅಧ್ಯಯನ ವಿಷಯವು ಆಸಕ್ತಿದಾಯಕವಾಗಿದ್ದು ನಾನು ಮನೆಯ ತೋಟದಲ್ಲಿ ಅನೇಕ ಲಾರ್ವಗಳನ್ನು ಸಂಗ್ರಹಿಸಿದ್ದು ಚಿಟ್ಟೆಗಳಾಗಿ ಪರಿವರ್ತಿಸಿ ಪರಿಸರಕ್ಕೆ ಬಿಡುವಸಿದ್ಧತೆ ನಡೆಸಿದ್ದೇನೆ ಎಂದನು.

ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ರವಿರಾಜ್‌ ಕಣಂತೂರು ಉಪಸ್ಥಿತರಿದ್ದರು. ವಿಶೇಷ ತರಬೇತುದಾರರಾಗಿ ವಿಜ್ಞಾನ ಅಧ್ಯಾಪಕರಾದ ಜ್ಯೋತಿ, ಪೂರ್ಣಿಮ ಭಾಗವಹಿಸಿ ಕಾರ್‍ಯಗಾರವನ್ನು ನಡೆಸಿಕೊಟ್ಟರು. ಅಧ್ಯಾಪಕರಾದ ಸುಮಂತ್ ಎಂ ಮರುವಾಳ, ಬಾಲಕೃಷ್ಣ ಸಹಕರಿಸಿದರು.

 

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts