ಬಂಟ್ವಾಳ

ಬಿ.ಸಿ.ರೋಡ್ ಗಣೇಶೋತ್ಸವ: ಅದ್ದೂರಿಯ ಶೋಭಾಯಾತ್ರೆ… ವಿವರ ಮತ್ತು ಫೊಟೋಗಳು

ಬಂಟ್ಚಾಳ: ಹಿಂದೂ ಧಾರ್ಮಿಕ ಸೇವಾ ಸಮಿತಿ ಬಿ.ಸಿ.ರೋಡು ಇದರ ಆಶ್ರಯದಲ್ಲಿ‌ಬಿ.ಸಿ.ರೋಡಿನ ಶ್ರೀರಕ್ತೇಶ್ವರೀ ದೇವಿ ಸನ್ನಿಧಿಯ ವಠಾರದಲ್ಲಿ‌4 ದಿನಗಳ ಕಾಲ ಆರಾಧಿಸಲ್ಪಟ್ಟ 44 ನೇ ಸಾರ್ವಜನಿಕ ಶ್ರೀಗಣೇಶನ ಶೋಭಾಯಾತ್ರೆಯು ಶುಕ್ರವಾರ ಸಂಜೆ ಬಿ.ಸಿ.ರೋಡಿ‌ನ ರಾ.ಹೆಯಲ್ಲಿ ಅದ್ದೂರಿಯಾಗಿ‌ ನಡೆಯಿತು.

ವಿಸರ್ಜನಾ ಪೂಜೆಯ ಬಳಿಕ ಉತ್ಸವ ಸ್ಥಳದಿಂದ ಹೊರಟ ಶ್ರೀಗಣೇಶನ ಶೋಭಾಯಾತ್ರೆ ತಲಪಾಡಿ‌ ಗಣಪತಿಕಟ್ಟೆಯ ವರೆಗೆ ಸಾಗಿ ಅಲ್ಲಿಂದ ವಾಪಾಸ್ ಅದೇದಾರಿಯಾಗಿ ಬಂದು ಮಯ್ಯರಬೈಲು,ಭಂಡಾರಿಬೆಟ್ಟು,ಬಂಟ್ವಾಳ ನೆರೆವಿಮೋಚನಾ ರಸ್ತೆಯಾಗಿ ತೆರಳಿ ಶ್ರೀ ವೆಂಕಟರಮಣ ದೇವಸ್ಥಾನದ ಬಳಿ ನೇತ್ರಾವತಿ‌ನದಿಯಲ್ಲಿ‌ ಜಲಸ್ತಂಭನಗೊಳಿಸಲಾಯಿತು.

ಬೆಳಿಗ್ಗೆ ಗಣಹೋಮ,ಮಧ್ಯಾಹ್ನ ಮಂಗಳಾರತಿಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆಯು ನಡಯಿತು. ಬಂಟ್ವಾಳ ಚಿಲಿಪಿಲಿ ಗೊಂಬೆಬಳಗದ ಕೀಲುಕುದುರೆ,ಯಕ್ಷಗಾನಗೊಂಬೆ,ಗೊಂಬೆಕುಣಿತ,ಸ್ಯಾಕ್ಸೋಪೋನ್,ಬ್ಯಾಂಡ್,ಚೆಂಡೆ ವಾದನ,ನಾಸಿಕ್ ಬ್ಯಾಂಡ್,  ಹುಲಿವೇಷಗಳ ಅಬ್ಬರ,ವಿವಿಧ ಸಂಘಸಂಸ್ಥೆಗಳ ಸ್ತಬ್ದಚಿತ್ರ,ಟ್ಯಾಬ್ಲೋ, ಸುಡುಮದ್ದು ಪ್ರದರ್ಶನ ಶೋಭಾಯಾತ್ರೆಗೆ ವಿಶೇಷ ಮೆರಗು ನೀಡಿತು.ಪೈಬರ್ ಮೋಲ್ಡ್ ನ ವಿಭಿನ್ನ ವೇಷ ಭೂಷಣ,ಮಕ್ಕಳ ಕುಣಿತ ಭಜನೆ ಗಮನಸೆಳೆಯಿತು.


ಶ್ರೀಗಣೇಶೋತ್ಸವ ಸಮಿತಿ ಅಧ್ಯಕ್ಷ ಎಂ.ಸತೀಶ್ ಭಂಡಾರಿ,ಪದಾಧಿಕಾರಿಗಳಾದ ಸುರೇಶ್ ಕುಮಾರ್ ಕೈಕಂಬ, ಎಂ.ಸತೀಶ್ ಶೆಟ್ಟಿ ಮೊಡಂಕಾಪು, ಭಾಸ್ಕರ ಟೈಲರ್, ಬಿ.ಮೋಹನ್, ಶ್ರೀಧರ ಶೆಣೈ,ಪುಪ್ಪರಾಜ್ ಶೆಟ್ಟಿ,ಲೋಕನಾಥ ಶೆಟ್ಟಿ,ರಾಜೇಶ್ ಎಲ್.ನಾಯಕ್, ದೇವದಾಸ ಶೆಟ್ಟಿ ಬಂಟ್ವಾಳ, ಭುವನೇಶ್ ಪಚ್ಚಿನಡ್ಕ, ಪ್ರಮೋದ್‌ ಕುಮಾರ್ ಅಜ್ಜುಬೆಟ್ಟು ,ಗೋಪಾಲ ಸುವರ್ಣ,ಚರಣ್ ಜುಮಾದಿಗುಡ್ಡೆ ,ಬಸ್ತಿಸದಾಶಿವ ಶೆಣೈ ಮೊದಲಾದವರಿದ್ದರು.ಸಾವಿರಾರು ಸಂಖ್ಯೆಯಲ್ಲಿ ಭಕ್ತರು ರಸ್ತೆಯುದ್ದಕ್ಕು ಶೋಭಾಯತ್ರೆಯನ್ನು ಕಣ್ತುಂಬಿಕೊಂಡರು.ಬಂಟ್ವಾಳ ನಗರಪೊಲೀಸರು ಬಂದೋಬಸ್ತು ಏರ್ಪಡಿಸಿದ್ದರು.ರಕ್ತೇಶ್ವರೀ ಸನ್ನಿಧಿ ವಠಾರವನ್ನು ಸಂಪೂರ್ಣ ಕೆಸರಿಮಯಗೊಳಿಸಲಾಗಿತ್ತು. ಇನ್ನಷ್ಟು ಚಿತ್ರಗಳಿವೆ ಸ್ಕ್ರೋಲ್ ಮಾಡಿರಿ… (ಚಿತ್ರಗಳು: ಕಿಶೋರ್ ಪೆರಾಜೆ)

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ