ಬಾಳ್ತಿಲ ಗ್ರಾಪಂ ಸಭಾಂಗಣದಲ್ಲಿ ವಿವಿಧ ಇಲಾಖೆ, ಸಂಘಟನೆ ಸಹಯೋಗದಲ್ಲಿ ಮಾಹಿತಿ ಕಾರ್ಯಕ್ರಮ ಗ್ರಾಪಂ ಅಧ್ಯಕ್ಷ ಬಿ.ಕೆ.ಅಣ್ಣು ಪೂಜಾರಿ ಗೆಜ್ಜೆಗಿರಿ ನೇತೃತ್ವದಲ್ಲಿ ನಡೆಯಿತು.
ಸ್ವಚ್ಛತಾ ರಾಯಭಾರಿ ಮಾಜಿ ಓಂಬುಡ್ಸ್ ಮನ್ ಶೀನ ಶೆಟ್ಟಿ, ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ ಭಾಗವಹಿಸಿದ್ದರು. ಕೌಟುಂಬಿಕ ದೌರ್ಜನ್ಯ, ಕಿರುಕುಳ, ಅತ್ಯಾಚಾರ, ಲೈಂಗಿಕ ಕಿರುಕುಳ ಸೇರಿದಂತೆ ವಿವಿಧ ರೀತಿಯ ಶೋಷಣೆ ಮತ್ತು ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಸಮಾಲೋಚನೆ ಮತ್ತು ಅಗತ್ಯ ಕಾನೂನು ನೆರವು, ಅಗತ್ಯ ಮಾಹಿತಿ, ಮಾರ್ಗದರ್ಶನ, ಪ್ರೇರಣೆ ಮತ್ತು ಪೂರಕ ತರಬೇತಿ ವ್ಯವಸ್ಥೆ ಮಾಡುವುದರೊಂದಿಗೆ ಸಾಂತ್ವನ ಕೇಂದ್ರ ಮಹಿಳಾ ಸಹಾಯವಾಣಿ ಸೇವೆಯನ್ನು ಸಮಾಜಕಾರ್ಯ ಸಂಸ್ಥೆ ಜನ ಶಿಕ್ಷಣ ಸಂಸ್ಥೆ ನಿರ್ವಹಿಸುತ್ತಿದೆ ಎಂದು ಈ ಸಂದರ್ಭ ಮಾಹಿತಿದಾರರಾದ ವಿದ್ಯಾ ತಿಳಿಸಿದರು.
ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಪಿ. ಎಸ್. ಮೋಹನ್, ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಾಣಾಧಿಕಾರಿ, ಸನ್ನಿಧಿ ಕಶೆಕೋಡಿ, ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ್ಯೊಪಾಧ್ಯಾಯರು, ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿ ವರ್ಗ,ಕಲ್ಪ ವೃಕ್ಷ ಸಂಜೀವಿನಿ ಒಕ್ಕೂಟ ದ ಸಿಬ್ಬಂದಿ ಭಾಗವಹಿಸಿದರು.