ಬಂಟ್ವಾಳ: ಜೇಸಿ ಜೋಡುಮಾರ್ಗ ಸಮಾಜಮುಖಿ ಕಾರ್ಯವನ್ನು ಮಾಡುತ್ತಿದ್ದು, ವ್ಯಕ್ತಿತ್ವ ವಿಕಸನ ತರಬೇತಿಗಳ ಮೂಲಕ ನಾಯಕತ್ವ ರೂಪಿಸಲು ಸಾಧ್ಯ ಎಂದು ಉದ್ಯಮಿ ಮಂಜುನಾಥ ಆಚಾರ್ಯ ಹೇಳಿದರು.
ಬಂಟ್ವಾಳ ಲಯನ್ಸ್ ಸಭಾಂಗಣದಲ್ಲಿ ಜೇಸಿ ಜೋಡುಮಾರ್ಗ ಆಯೋಜಿಸಿದ ಜೈತ್ರ ಹೆಸರಿನಲ್ಲಿ ಆಯೋಜಿಸಲಾದ ಜೇಸಿ ಸಪ್ತಾಹ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಭಾರತೀಯ ಲಲಿತಕಲೆಗಳ ಅಧ್ಯಯನ, ಅಧ್ಯಾಪನ ನಡೆಸಿರುವ ವಸುಧಾ ಜಿ.ಎನ್. ಬೋಳಂತೂರು ಅವರಿಗೆ ಕಲಾಶ್ರೀ ಮತ್ತು ಜೇಸಿ ಸಂಸ್ಥೆಯಲ್ಲಿ ನೀಡಿದ ಸೇವೆಗಾಗಿ ಶ್ರೀನಿಧಿ ಭಟ್ ಅವರಿಗೆ ಜೇಸಿ ಕಮಲಪತ್ರ ಪುರಸ್ಕಾರ ನೀಡಿ ಗೌರವಿಸಲಾಯಿತು.ಅಧ್ಯಕ್ಷತೆಯನ್ನು ಘಟಕಾಧ್ಯಕ್ಷೆ ಗಾಯತ್ರಿ ಲೋಕೇಶ್ ವಹಿಸಿದ್ದರು. ನಿಕಟಪೂರ್ವಾಧ್ಯಕ್ಷ ಹರಿಪ್ರಸಾದ್ ಕುಲಾಲ್, ಜೇಜೆಸಿ ಅಧ್ಯಕ್ಷೆ ರಶ್ಮಿತಾ, ಕಾರ್ಯಕ್ರಮ ನಿರ್ದೇಶಕ ಸುಬ್ರಹ್ಮಣ್ಯ ಪೈ ಉಪಸ್ಥಿತರಿದ್ದರು. ಕಾರ್ಯದರ್ಶಿ ರಮ್ಯ ವಿನಾಯಕ್ ವಂದಿಸಿದರು. .ಸಪ್ತಾಹ ಅಂಗವಾಗಿ ನೃತ್ಯವೈವಿಧ್ಯ ಸ್ಪರ್ಧೆ ನಡೆಯಿತು. ರವೀಂದ್ರ ಕುಕ್ಕಾಜೆ ಸ್ಪರ್ಧೆಯನ್ನು ನಿರ್ವಹಿಸಿದರು.