ಬಂಟ್ವಾಳ: ಜೇಸಿ ವಲಯ 15ರ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ಅವರು ಜೋಡುಮಾರ್ಗ ಜೇಸಿ ಘಟಕಕ್ಕೆ ಅಧಿಕೃತ ಭೇಟಿ ನೀಡಿದರು. ಜೋಡುಮಾರ್ಗ ಜೇಸಿ ವತಿಯಿಂದ ಒಟ್ಟು 6 ಲಕ್ಷ ರೂಪಾಯಿ ವೆಚ್ಚದ ವಿವಿಧ ಶಾಶ್ವತ ಯೋಜನೆಗಳನ್ನು ಹಸ್ತಾಂತರಿಸಿ ಸಂಜೆ ಬಿ.ಸಿ.ರೋಡಿನ ಪ್ರೀತಿ ಕಾಂಪ್ಲೆಕ್ಸ್ ಸಭಾಭವನದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೋಡುಮಾರ್ಗ ಜೇಸಿ ಉತ್ತಮ ಕೆಲಸಗಳನ್ನು ಮಾಡಿದೆ ಎಂದು ಶ್ಲಾಘಿಸಿದರು.
ಸರಪಾಡಿ ಸಮೀಪ ಕಾಯರ್ ಪಲ್ಕೆ ಎಂಬಲ್ಲಿರುವ ಹೆಗ್ಡೇಸ್ ಆಂಗ್ಲ ಮಾಧ್ಯಮ ಶಾಲೆಗೆ ಕೊಡುಗೆಯಾಗಿ ಜೋಡುಮಾರ್ಗ ಜೇಸಿ ವತಿಯಿಂದ ನೀಡಲಾದ ಜೇಸಿ ಕಿಂಡರ್ ಪ್ಲೇ ಯಾರ್ಡ್, ನಲ್ಕೆಮಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕುರ್ಚಿಗಳು ಹಾಗೂ ಬೊಂಡಾಲದಲ್ಲಿರುವ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಪ್ರೌಢಶಾಲೆ, ಶಂಭೂರು ಇಲ್ಲಿಗೆ ನ್ಯಾಪ್ಕಿನ್ ಬರ್ನಿಂಗ್ ಮೆಷಿನ್ ಅನ್ನು ಜೇಸಿ ವತಿಯಿಂದ ಕೊಡುಗೆಯಾಗಿ ನೀಡಲಾಗಿತ್ತು. ಎಲ್ಲ ಯೋಜನೆಗಳಲ್ಲಿ ಆಯಾ ಶಾಲೆಗಳಿಗೆ ಭೇಟಿ ಇತ್ತ ವಲಯಾಧ್ಯಕ್ಷರು ಲೋಕಾರ್ಪಣೆಗೊಳಿಸಿದರು.
ಜೆಸಿಐ ಜೋಡುಮಾರ್ಗ ನೇತ್ರಾವತಿಯ ಅಧ್ಯಕ್ಷೆ ಗಾಯತ್ರಿ ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು. ವಲಯಾಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮದ ವೇಳೆ ಮೂರು ಶಾಲೆಗಳಿಗೆ ಒಟ್ಟು 6 ಲಕ್ಷ ರೂಪಾಯಿ ವೆಚ್ಚದ ಯೋಜನೆಗಳನ್ನು ಒಂದೇ ದಿನದಲ್ಲಿ ನೀಡಲಾಗಿದೆ. ಈ ಸಂದರ್ಭವೇ ಜೇಸಿ ಸಪ್ತಾಹವೂ ನಡೆಯುತ್ತಿದ್ದು ಅನೇಕ ವೈವೀದ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿ ಲೋಕೇಶ್, ಘಟಕದ ಕೋಶಾಧಿಕಾರಿ ದೀಪ್ತಿ ಶ್ರೀನಿಧಿ ಭಟ್, ಹಾಗೂ ಅನಿಲ್ ವಡಗೇರಿ ಅವರನ್ನು ಸನ್ಮಾನಿಸಲಾಯಿತು.
ವಲಯ 15ರ ಉಪಾಧ್ಯಕ್ಷ ಅಜಿತ್ ಕುಮಾರ್ ರೈ, ವಲಯಾಧ್ಯಕ್ಷರ ಆಪ್ತ ಕಾರ್ಯದರ್ಶಿ ಕಾರ್ತಿಕ್, ನಿಕಟಪೂರ್ವಾಧ್ಯಕ್ಷ ಹರಿಪ್ರಸಾದ್ ಕುಲಾಲ್ ಶುಭ ಹಾರೈಸಿದರು. ಹೆಗ್ಡೆಸ್ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಪ್ರಕಾಶ್ ಎಂ. ಹೆಗ್ಡೆ, ಸಂಚಾಲಕಿ ಪ್ರೀತಿ ಪ್ರಕಾಶ್ ಹೆಗ್ಡೆ, ಜೇಸಿ ಸಪ್ತಾಹ ಕಾರ್ಯಕ್ರಮ ಸಂಯೋಜಕ ಸುಬ್ರಹ್ಮಣ್ಯ ಪೈ, ಹೆಗ್ಡೇಸ್ ಶಾಲೆಯ ಮುಖ್ಯೋಪಾಧ್ಯಾಯಿನಿ ಸಬಿತಾ, ನಲ್ಕೆಮಾರ್ ಶಾಲೆಯ ಮುಖ್ಯೊಪಾಧ್ಯಾಯಿನಿ ಜ್ಯೋತಿಕುಮಾರಿ, ನಲ್ಕೆಮಾರ್ ಶಾಲೆಯ ಎಸ್‌ಡಿಎಸಿ ಅಧ್ಯಕ್ಷ ವಿಜಯ್ ಕುಮಾರ್, ಸಹಶಿಕ್ಷಕಿ ರೇಖಾ, ಬೊಂಡಾಲ ಸರಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಕಮಲಾಕ್ಷ, ಸಹಶಿಕ್ಷಕ ಹರಿಪ್ರಸಾದ್, ಜೆಸಿಐ ಜೋಡುಮಾರ್ಗ ನೇತ್ರಾವತಿಯ ಜೇಸಿ ಪೂರ್ವಾಧ್ಯಕ್ಷ ರಾಮಚಂದ್ರ ರಾವ್ ಸಹಿತ ಸದಸ್ಯರು ಉಪಸ್ಥಿತರಿದ್ದರು, ಕಾರ್ಯದರ್ಶಿ ರಮ್ಯ ವಿನಾಯಕ ವರದಿ ವಾಚಿಸಿ, ವಂದಿಸಿದರು.