ಕಳೆದ ನಲ್ವತ್ತು ವರ್ಷಗಳಿಂದ ಬಿ.ಸಿ.ರೋಡ್ ಪರಿಸರದಲ್ಲಿ ಆಟೊ ಚಾಲಕರಾಗಿ ಪರಿಸರದಾದ್ಯಂತ ಜನಾನುರಾಗಿಯಾಗಿದ್ದ ಚಂದ್ರಶೇಖರ ದರಿಬಾಗಿಲು (66) ಅವರು ಅಲ್ಪಕಾಲದ ಅಸೌಖ್ಯದ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 7ರಂದು ನಿಧನ ಹೊಂದಿದರು. ಅವಿವಾಹಿತರಾಗಿದ್ದ ಅವರು ಬ್ರಹ್ಮರಕೂಟ್ಲು ಸಮೀಪ ದರಿಬಾಗಿಲು ಎಂಬಲ್ಲಿ ವಾಸಿಸುತ್ತಿದ್ದರು. ಸೌಮ್ಯ ಸ್ವಭಾವದವರಾಗಿದ್ದು, ಬಿ.ಸಿ.ರೋಡ್ ಪರಿಸರದ ಜನರ ಅಚ್ಚುಮೆಚ್ಚಿನ ಆಟೊ ಚಾಲಕರಾಗಿದ್ದ ಅವರು, ತನ್ನ ಮಾನವೀಯ ಗುಣಗಳಿಂದ ಜನಪ್ರಿಯರಾಗಿದ್ದರು.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)